Manipur Election 2022 : ಕಾಂಗ್ರೆಸ್ ಪ್ರನಾಳಿಕೆ – 30 ಭರವಸೆಗಳು , AFSPA ಕಾನೂನು ರದ್ದು….
ಮಣಿಪುರ : ದೇಶದಲ್ಲಿ ಈ ವರ್ಷ ನಡೆಯಲಿರುವ ಪಂಚರಾಜ್ಯಗಳ ಚುನಾವಣಾ ಕಾವು ಹೆಚ್ಚಾಗ್ತಿದ್ದು , ಕಾಂಗ್ರೆಸ್ ಬಿಜೆಪಿ ನಡುವೆ ಭಾರೀ ಪೈಪೋಟಿ ಇದೆ.. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆಕರ್ಷಕ ಭರವಸೆಗಳನ್ನ ನೀಡಿದೆ.. ಇದೀಗ ಮಣಿಪುರದಲ್ಲಿ ವಿವಾದಾತ್ಮಕ ಕಾನೂನು AFSPA ಹಿಂಪಡೆಯುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ..
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಣಿಪುರದ ಜನರಿಗೆ ಹಲವಾರು ಮಹತ್ವದ ಭರವಸೆಗಳನ್ನ ನೀಡಿದೆ. ವಿವಾದಾತ್ಮಕ ಸಶಸ್ತ್ರ ಪಡೆಗಳ ಕಾಯಿದೆ ರದ್ದತಿ, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ ಸೇರಿದಂತೆ 30 ಭರವಸೆಗಳನ್ನು ನೀಡಿದೆ.. ಮಣಿಪುರ ಕಾಂಗ್ರೆಸ್ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ತಿದೆ..
Facebook : ಶ್ರೀಮಂತರ ಪಟ್ಟಿಯಲ್ಲಿ ಫೇಸ್ ಬುಕ್ ಒಡೆಯನನ್ನೇ ಹಿಂದಿಟ್ಟ ಭಾರತೀಯರು….
ಅಲ್ಲದೇ ಭಯೋತ್ಪಾದಕರನ್ನು ಗುರಿಯಾಗಿಸಲು ಆರ್ಮಿ ಪ್ಯಾರಾ ಕಮಾಂಡೋಸ್ ನಡೆಸಿದ “ಬೋಚ್ಡ್ ಅಪ್ ಆಪರೇಷನ್ ” ಸಮಯದಲ್ಲಿ ನಾಗಾಲ್ಯಾಂಡ್ನ ಮೋನ್ ಜಿಲ್ಲೆಯಲ್ಲಿ ನಾಗರಿಕರು ಸಾವನಪ್ಪಿದ ನಂತರ, ವಿವಾದಿತ AFSPA ವಿರುದ್ಧ ಜನಾಕ್ರೋಶ ಭುಗಿಲೆದ್ದಿತ್ತು.. ಈ ಕಾನೂನನ್ನು ತಕ್ಷಣ ಹಿಂಪಡೆಯಬೇಕೆಂದು ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಹಲವರು ಒತ್ತಾಯಿಸಿದ್ದರು…
ಅಲ್ಲದೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುನ್ಸಿಪಲ್ ಸಾಂಸ್ಕೃತಿಕ ವೈವಿಧ್ಯ ನೀತಿ, ಮಕ್ಕಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಮಣಿಪುರ ರೆಜಿಮೆಂಟ್ ರಚನೆ ಮತ್ತು ಮಣಿಪುರ ವ್ಯಾಪಾರ ಕೇಂದ್ರ ರಚನೆ, ತಪ್ಪುಮಾಡದೇ , ಕೆಲ ಸನ್ನಿವೇಶಗಳಿಂದ ಬಂಧಿತರಾಗಿರುವ ಮಾಧ್ಯಮ ಪ್ರತಿನಿಧಿಗಳ ಬಿಡುಗಡೆಗೆ ಕ್ರಮ, ಸಾಂಕ್ರಾಮಿಕ ರೋಗದಿಂದಾಗಿ ನಿರುದ್ಯೋಗಿಗಳಾಗಿರುವ ಯುವಕರಿಗೆ ಮೂರು ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆ , ದ್ಯೋಗ ಭರವಸೆ ಸೇರಿದಂತೆ ಇತರ ಭರವಸೆಗಳು ಇವೆ…
manipur elections 2022 – AFSPA law