ಮಣಿಪುರ: ಐವರು ಜೆಡಿಯು ಶಾಸಕರು ಆಡಳಿತಾರೂಢ ಬಿಜೆಪಿಯೊಂದಿಗೆ ವಿಲೀನ!
Manipur: Five JDS MLAs merge with ruling BJP!
ಮಣಿಪುರದ ಆರು ಜನತಾ ದಳ-ಯುನೈಟೆಡ್ (ಜೆಡಿ-ಯು) ಶಾಸಕರ ಪೈಕಿ ಐವರು ಶಾಸಕರು ಶುಕ್ರವಾರ ರಾತ್ರಿ ಆಡಳಿತಾರೂಢ ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ. ಕಳೆದ ತಿಂಗಳು ನಡೆದ ಬಿಹಾರ ಬಿ ಜೆ ಪಿ ಮತ್ತು ಜೆ ಡಿ ಯು ನಡುವಿನ ಮುಸುಕಿನ ಗುದ್ದಾಟದಿಂದ ನಿತೀಶ್ ಏನ್ ಡಿ ಏ ಹೊರನಡೆದ ಬೆನ್ನಲ್ಲೇ ಈಶಾನ್ಯ ರಾಜ್ಯಗಳಲ್ಲಿ ಜೆ ಡಿ ಯು ಶಾಸಕರು ಬಿ ಜೆ ಪಿ ಪಕ್ಷಕ್ಕೆ ಸೇರಿರುವುದು ಅನೇಕ ಸಂಶಯಕ್ಕೆ ಎಡೆಮಾಡಿದೆ.ನಿತೀಶ್ ಬಿಹಾರದಲ್ಲಿ ಜೆ ಡಿ ಯು ಪಕ್ಷವನ್ನು ಆಪರೇಷನ್ ಕಮಲದಿಂದ ಪಾರುಮಾಡಿದರ ಅನ್ನುವುದಕ್ಕೆ ಈಶಾನ್ಯ ರಾಜ್ಯದ ರಾಜಕೀಯ ಬೆಳವಣಿಗೆಯೇ ಸ್ಪಷ್ಟ ನಿದರ್ಶನವಾಗಿದೆ.