ಆರ್ ಸಿಬಿಗೆ ಮನೀಶ್ ಪಾಂಡೆ ಕ್ಯಾಪ್ಟನ್.. ಇದರ ಸತ್ಯಾಸತ್ಯತೆ ಏನು..? Manish Pandey saakshatv
ಐಪಿಎಲ್ ನ ಸೂಪರ್ ಸ್ಟಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಯಾರು..? ಎಂಬ ಪ್ರಶ್ನೆ ಮಿಲಿಯನ್ ಡಾಲರ್ ಟೂರ್ನಿಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕತ್ವಕ್ಕೆ ಗುಡ್ ಬೈ ಹೇಳಿರೋದು ಗೊತ್ತಿರುವ ಸಂಗತಿ. ಹೀಗಾಗಿ ಆರ್ ಸಿಬಿಯ ನಾಯಕ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಆರಂಭದಲ್ಲಿ ಆರ್ ಸಿಬಿ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಅವರೇ ಬೆಂಗಳೂರು ತಂಡದ ಮುಂದಿನ ನಾಯಕ ಎಂದು ಹೇಳಲಾಗುತ್ತಿತ್ತು.
ಆದ್ರೆ ಇದೀಗ ಮನೀಶ್ ಪಾಂಡೆ ಹೆಸರು ಮುನ್ನಲೆಗೆ ಬಂದಿದೆ. ಸದ್ಯ ದೇಶಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಮನೀಶ್ ಪಾಂಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾರಥಿಯಾಗಲಿದ್ದಾರೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.
ಆದರೇ ಅಸಲಿ ಸತ್ಯ ಏನಂದರೇ.. ಆರ್ ಸಿಬಿ ತಂಡಕ್ಕೆ ಇಷ್ಟು ವರ್ಷ ವಿರಾಟ್ ನಾಯಕರಾಗಿದ್ದರು. ಹೀಗಾಗಿ ನಾಯಕನ ಚಿಂತೆ ಇರಲಿಲ್ಲ.
ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ, ಕನ್ನಡಿಗರಿಲ್ಲ ಅನ್ನೋ ಮಾತು ದೊಡ್ಡದಾಗಿ ಕೇಳಿಬರುತ್ತಿತ್ತು. ಆದ್ರೆ ಕಳೆದ ಕೆಲ ಆವೃತ್ತಿಯಲ್ಲಿ ತಂಡದಲ್ಲಿ ಕನ್ನಡಿಗರು ಕಾಣಿಸಿಕೊಂಡರು.
ಇನ್ನು ಅನಿಲ್ ಕುಂಬ್ಳೆ ಬಳಿಕ ಈವರೆಗೂ ಆರ್ ಸಿಬಿಯಲ್ಲಿ ಕನ್ನಡದವರು ನಾಯಕರಾಗಿಲ್ಲ. ಹೀಗಾಗಿ ಸದ್ಯ ವಿರಾಟ್ ಕೊಹ್ಲಿಯೇ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ಕನ್ನಡದವರೇಯಾದ ಮನೀಶ್ ಪಾಂಡೆಗೆ ನಾಯಕನ ಪಟ್ಟ ನೀಡಬೇಕೆಂದು ಆರ್ ಸಿಬಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ಆರಂಭದಲ್ಲಿ ಕೆ.ಎಲ್.ರಾಹುಲ್ ಗೆ ನಾಯಕತ್ವ ನೀಡಬೇಕು ಎಂದು ಹೇಳಲಾಗುತ್ತಿತ್ತು. ಆದ್ರೆ ಕೆ.ಎಲ್ ಲಕ್ನೋ ಕಡೆ ಮುಖ ಮಾಡಿರುವುದರಿಂದ ಆರ್ ಸಿಬಿ ಅಭಿಮಾನಿಗಳು ಮನೀಶ್ ಪಾಂಡೆ ಹಿಂದೆ ಬಿದ್ದಿದ್ದಾರೆ.
ಅಂದರೇ ಸದ್ಯ ಕರ್ನಾಟಕ ತಂಡದ ನಾಯಕರಾಗಿರುವ ಮನೀಶ್ ಪಾಂಡೆಗೆ ಆರ್ ಸಿಬಿ ನಾಯಕತ್ವ ನೀಡಬೇಕು ಎಂದು ಫ್ರಾಂಚೈಸಿಯನ್ನು ಒತ್ತಾಯಿಸುತ್ತಿದೆ. ಹೀಗಾಗಿ ಆರ್ ಸಿಬಿ ಫ್ರಾಂಚೈಸಿ ಕೂಡ ಈ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಆರ್ ಸಿಬಿ ತಂಡದ ಮೂಲಗಳ ಪ್ರಕಾರ, ಮನೀಶ್ ಪಾಂಡೆಗೆ ನಾಯಕತ್ವ ನೀಡಿದರೇ ಫ್ರಾಂಚೈಸಿಗೆ ಆಗುವ ಲಾಭಗಳ ಬಗ್ಗೆ ಚರ್ಚೆ ನಡೆಸುತ್ತಿದೆಯಂತೆ.
ಒಂದು ವೇಳೆ ಮನೀಶ್ ತಂಡಕ್ಕೆ ಸೇರಿದರೇ ಕಳೆದ ಕೆಲ ವರ್ಷಗಳಿಂದ ಎದುರಾಗಿರುವ ಒನ್ ಡೌನ್ ಬ್ಯಾಟರ್ ನ ಸಮಸ್ಯೆ ಬಗೆಹರಿಯಲಿದೆ.
ಜೊತೆಗೆ ಇಂಡಿಯನ್ ಆಟಗಾರ ಕ್ಯಾಪ್ಟನ್ ಆದ್ರೆ ವಿದೇಶಿ ಆಟಗಾರರ ಬದಲಾವಣೆ ಸುಲಭವಾಗಲಿದೆ.
ಮುಖ್ಯವಾಗಿ ಸದ್ಯ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿರುವ ಹೊಡೆತಕ್ಕೆ ಮನೀಶ್ ಮುಲಾಮಾಗುವ ಚಾನ್ಸ್ ಇದೆ. ಕನ್ನಡಿಗರೇ ನಾಯಕರಾದರೇ ಆರ್ ಸಿಬಿಗೆ ಕನ್ನಡಿಗರ ಆನೆ ಬಲ ಇರತ್ತದೆ ಎಂಬ ಪ್ಲಸ್ ಮೈನಸ್ ಚರ್ಚೆಗಳು ನಡೆಯುತ್ತಿವೆ.