ಬೆಳ್ತಂಗಡಿ : ಮುಜರಾಯಿ ಇಲಾಖೆ ಜೂನ್ 1 ರಿಂದ ದೇವಸ್ಥಾನಗಳು ತೆರೆಯಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಜೂನ್ 1 ರಿಂದ ಅವಕಾಶ ಮಾಡಿಕೊಡಲಾಗುತ್ತಿದೆ ಕೊರೊನಾ ಎಫೆಕ್ಟ್ ನಿಂದಾಗಿ ರಾಜ್ಯದ ದೇವಾಲಯಗಳು ಬಂದ್ ಆಗಿದ್ದವು. ಇದೀಗ ಎರಡುವರೆ ತಿಂಗಳ ಬಳಿಕ ಮತ್ತೆ ದೇವಸ್ಥಾನಗಳು ಓಪನ್ ಆಗುತ್ತಿವೆ. ಈ ಬಗ್ಗೆ ಮಾಹಿತಿ ನೀಡಿದ ಡಾ.ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು.ವಿ ಶೆಟ್ಟಿ, ಜೂನ್ 1 ರಿಂದ ದೇವಾಲಯ ಓಪನ್ ಆಗುತ್ತದೆ .
ಸರ್ಕಾರದ ನಿಯಮಾವಳಿಗಳನ್ನು ತಪ್ಪದೆ ಕಡ್ಡಾಯವಾಗಿ ಪಾಲಿಸುತ್ತೇವೆ. ಕೊರೊನಾ ನಿಯಂತ್ರಣ ಸಂಪೂರ್ಣ ಒತ್ತು ನೀಡುತ್ತೇವೆ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅಲ್ಲದೆ ನಿಗದಿತ ಸಂಖ್ಯೆಯಲ್ಲಿ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು. ಇದೆ ವೇಳೆ ಲಾಕ್ ಡೌನ್ ಸಡಿಲಗೊಂಡರು ಕ್ಷೇತ್ರದಲ್ಲಿ ಯಾವುದೇ ಅಂಗಡಿಗಳು ಓಪನ್ ಮಾಡಿಲ್ಲ. ಜನರೇ ಸ್ವಯಂ ಜಾಗೃತಿ ಮೂಡಿಸಿಕೊಂಡಿದ್ದಾರೆ. ಇಲ್ಲಿ ನಡೆದ ಧರ್ಮ ಜಾಗೃತಿ ಮಾದರಿಯಾಗಿದೆ ಎಂದು ಸ್ಮರಿಸಿದರು.








