ಬೆಂಗಳೂರು: ದೇಶದ 130 ಟನ್ ಚಿನ್ನವನ್ನು ಅಡ ಇಟ್ಟಿದ್ದ ಭೀಕರ ಪರಿಸ್ಥಿತಿಯಲ್ಲಿ ಹಣಕಾಸು ಮಂತ್ರಿಯಾಗಿ ಮನಮೋಹನ್ ಸಿಂಗ್ (Manmohan Singh) ದೇಶಕ್ಕಾಗಿ ಮಾಡಿದ ಕಾರ್ಯವನ್ನು ಯಾರೂ ಮರೆಯುವಂತಿಲ್ಲ ಎಂದು ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಜೆಡಿಎಸ್ ಕಚೇರಿಯಲ್ಲಿ ನಡೆದ ಸಂತಾಪ ಸೂಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ದುಃಖದ ದಿವಸ. ಮನಮೋಹನ್ ಸಿಂಗ್ ಅವರನ್ನು ನಾನು ನೋಡಿದ್ದು ಲೋಕಸಭೆಯಲ್ಲಿ. 1991 ರಲ್ಲಿ ನಾನು ಕರ್ನಾಟಕದಿಂದ ಮೊದಲ ಬಾರಿಗೆ ಲೋಕಸಭೆಗೆ ಹೋದಾಗಿ ನೋಡಿದ್ದೆ. ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಮಂತ್ರಿ ಆಗಿದ್ದರು ಎಂದು ನೆನೆದರು.
ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದರು. ವಿಶ್ವಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಅವರ ತಂದೆ ಪಾಕಿಸ್ತಾನದಿಂದ ಬಂದವರು. ಸಿಂಗ್ ಅವರು ಆರ್ಥಿಕವಾಗಿ ತುಂಬಾ ಬುದ್ದಿವಂತರು. ಅವರಿಗೆ ಬಹಳ ಅನುಭವ ಆರ್ಥಿಕ ವಿಚಾರದಲ್ಲಿ ಇತ್ತು. ನರಸಿಂಹ ರಾವ್ ಪ್ರಧಾನಿ ಆದಾಗ ದೇಶದ ಸ್ಥಿತಿ ತುಂಬಾ ಹದಗೆಟ್ಟಿತ್ತು. ಆಗ ನಮ್ಮ ದೇಶದ 130 ಟನ್ ಚಿನ್ನವನ್ನ ಅಡ ಇಡಲಾಗಿತ್ತು. ಅಂತಹ ಭೀಕರ ಪರಿಸ್ಥಿತಿ ಅವತ್ತು ಇತ್ತು. ಅಂತಹ ಸನ್ನಿವೇಶದಲ್ಲಿ ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ದರು. ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ತಮ್ಮ ಪ್ರಯತ್ನ ಆರಂಭಿಸಿ, ಯಶಸ್ವಿಯಾದರು ಎಂದು ಹೇಳಿದ್ದಾರೆ.
ಅವರೊಬ್ಬ ದೇಶದ ಪ್ರಧಾನಿ ಆಗಿದ್ದವರು. ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಪಕ್ಷದ ಪರವಾಗಿ, ವಯಕ್ತಿಕವಾಗಿ ಗೌರವ ಸಲ್ಲಿಸಿದ್ದಾರೆ. ಇವತ್ತು ನಮ್ಮ ಪಕ್ಷದ ಸಂಘಟನೆ ಸಭೆ ಇತ್ತು. ಇದೊಂದು ಶೋಕ ದಿನ. 7 ದಿನ ಶೋಕಾಚರಣೆ ಮಾಡಲಾಗುತ್ತಿದೆ ಎಂದಿದ್ದಾರೆ.
ಬ್ರಿಡ್ಜ್ ಗೆ ಬಸ್ ಡಿಕ್ಕಿ; ಶಿಕ್ಷಕಿ ಬಲಿ, 15 ವಿದ್ಯಾರ್ಥಿಗಳು ಗಂಭೀರ
ನಿರ್ಮಾಣ ಹಂತದಲ್ಲಿದ್ದ ಬ್ರಿಡ್ಜ್ ಗೆ ಶಾಲಾ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿಯೊಬ್ಬರು ಸಾವನ್ನಪ್ಪಿ, 15 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಈ ಘಟನೆ...