ದೆಹಲಿ: ಸರ್ಕಾರಿ ನೌಕರರ ಡಿಎ ಏರಿಕೆಯನ್ನು ಏಕಾಏಕಿ ನಿಲ್ಲಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ. ಈ ನಿಟ್ಟಿನಲ್ಲಿ ನಿನ್ನೆ.
As #COVID spreads, Modi Govt hurts 1.1cr Central Govt employees instead of providing relief. Withdrawing DA instead of cutting wasteful expenditure like Central Vista project is insensitive & inhumane. Former PM Dr. Manmohan Singh, Shri @RahulGandhi & others express deep concern. pic.twitter.com/M6WQ0tojxG
— Congress (@INCIndia) April 25, 2020
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಲೆಟ್ ಟ್ರೈನ್ ಪ್ರಾಜೆಕ್ಟ್ ನಿಲ್ಲಿಸುವ ಬದಲು ಸರ್ಕಾರಿ ನೌಕರರಿಗೆ ನೀಡುವ ಡಿಎ(ತುಟ್ಟಿಭತ್ಯೆ)ಯನ್ನು ನಿಲ್ಲಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಇದೀಗ ಇವತ್ತು ಈ ಸಂಬಂಧ ಕಾಂಗ್ರೆಸ್ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಅದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪಿ.ಚಿದಂಬರಂ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
ವಿಡಿಯೋದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಇಂತಹ ಕ್ರಮದ ಅಗತ್ಯವಿರಲಿಲ್ಲ. ಡಿಎ ಕಡಿತಗೊಂಡ ನೌಕರರ ಪರವಾಗಿ ನಾವು ನಿಲ್ಲಬೇಕಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರ ಮೇಲೆ ಇನ್ನೊಂದಿಷ್ಟು ಕಷ್ಟವನ್ನು ಹೇರುವುದು ಅಗತ್ಯವಾಗಿರಲಿಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ವಿಡಿಯೋದಲ್ಲಿ ರಾಹುಲ್ ಗಾಂಧಿ ಮಾತನಾಡಿ, ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು, ಸೈನಿಕರ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಸೌಲಭ್ಯವನ್ನು ಕಡಿತ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಅಮಾನವೀಯ ಮತ್ತು ಅಸಂವೇದನಾಶೀಲವಾದದ್ದು ಎಂದಿದ್ದಾರೆ.








