Mann Ki Baat: ಸ್ವರಾಜ್ ಧಾರಾವಾಹಿ ನೋಡುವಂತೆ ದೇಶವಾಸಿಗಳಿಗೆ ಒತ್ತಾಯಿಸಿದ ಪ್ರಧಾನಿ ಮೋದಿ…
ದೇಶವಾಸಿಗಳನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ 92 ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವರಾಜ್ ಧಾರಾವಾಹಿಯನ್ನ ವಿಕ್ಷಿಸುವಂತೆ ನಾಗರೀಕರಿಗೆ ಒತ್ತಾಯಿಸಿದರು ಮತ್ತು ಶಾಲೆಗಳಲ್ಲಿ ಈ ಕುರಿತು ವಿಶೇಷ ಕಾರ್ಯಕ್ರಮ ನಡೆಸುವಂತೆ ಸೂಚಿಸಿದರು. ಇದರಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಹಾನ್ ವೀರರ ಬಗ್ಗೆ ಹೊಸ ಜಾಗೃತಿ ಮೂಡುತ್ತದೆ ಎಂದು ಪ್ರಧಾನಿ ಹೇಳಿದರು.
“ಸ್ವರಾಜ್ಯ ಧಾರಾವಾಹಿಯ ಪ್ರೀಮಿಯರ್ ಶೋ ಗೆ ಹೋಗಲು ನನಗೆ ಅವಕಾಶ ಸಿಕ್ಕಿತು. ಇದು ದೇಶದ ಯುವ ಪೀಳಿಗೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅಪ್ರತಿಮ ವೀರ ಮತ್ತು ನಾಯಕಿಯರ ಪ್ರಯತ್ನವನ್ನು ಪರಿಚಯಿಸುವ ಒಂದು ಉತ್ತಮ ಪ್ರಯತ್ನವಾಗಿದೆ. ಇದು ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತದೆ. ” ಎಂದು ಪ್ರಧಾನಿ ಮೋದಿ ಹೇಳಿದರು.
“ಇದನ್ನು ವೀಕ್ಷಿಸಲು ಮತ್ತು ಶಾಲಾ ಮಕ್ಕಳಿಗೆ ತೋರಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಸೋಮವಾರ ಶಾಲಾ-ಕಾಲೇಜುಗಳು ತೆರೆದಾಗ ನೀವು ರೆಕಾರ್ಡ್ ಮಾಡಿ ತೋರಿಸಬಹುದು. ಇದರಿಂದ ಮಕ್ಕಳಿಗೆ ದೇಶದ ಬಗ್ಗೆ ಜಾಗೃತಿ ಮೂಡುತ್ತದೆ ಎಂದು ತಿಳಿಸಿದರು.
ಸ್ವರಾಜ್ 75 ಕಂತುಗಳ ಧಾರಾವಾಹಿಯಾಗಿದ್ದು, ಸ್ವಾತಂತ್ರ್ಯ ಹೋರಾಟದ ವೈಭವದ ಇತಿಹಾಸ ಮತ್ತು ಭಾರತೀಯ ಇತಿಹಾಸದ ಬಗ್ಗೆ ಅಷ್ಟಾಗಿ ತಿಳಿದಿಲ್ಲದ ಕಥೆಗಳನ್ನು ಪ್ರಸ್ತುತಪಡಿಸುತ್ತದೆ. ಇದು ಆಗಸ್ಟ್ 14 ರಿಂದ ದೂರದರ್ಶನ ನ್ಯಾಷನಲ್ನಲ್ಲಿ ಪ್ರತಿ ಭಾನುವಾರ ರಾತ್ರಿ 9 ರಿಂದ 10 ರವರೆಗೆ ಪ್ರಸಾರವಾಗುತ್ತಿದೆ. ಕಾರ್ಯಕ್ರಮವು ಒಂಬತ್ತು ಭಾಷೆಗಳಲ್ಲಿ ಡಬ್ ಆಗುತ್ತಿದೆ. ಪ್ರಾದೇಶಿಕ ಭಾಷೆಗಳು — ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಒರಿಯಾ, ಬಂಗಾಳಿ ಮತ್ತು ಅಸ್ಸಾಮಿ ಜೊತೆಗೆ ಇಂಗ್ಲಿಷ್.








