ಮಾರ್ಚ 31 ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ
ತುಮಕೂರು: ಮಾರ್ಚ 31 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿಯವರು ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಗೌರವ ಗೌವ ಸಮರ್ಪಣೆ ಮಾಡಲಿದ್ದಾರೆ. ಈ ಹಿಂದೆ ಶಿವಕುಮಾರ ಸ್ವಾಮಿಜಿ ಇದ್ದಾಗ ಸೋನಿಯಾ ಗಾಂಧಿ ಅವರು ಭೇಟಿ ನೀಡಿ ಆಶಿರ್ವಾದ ಪಡೆದಿದ್ದರು ಎಂದು ಹೇಳಿದರು.
ಅಲ್ಲದೇ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶಿರ್ವಾದ ಪಡೆಯಲಿದ್ದಾರೆ. ಮಾ.31ರಂದು ಸಂಜೆ 4 ರಿಂದ 5 ಗಂಟೆವರೆಗೆ ಮಠದಲ್ಲಿ ಕಾರ್ಯಕ್ರಮ ಇರುತ್ತದೆ. ರಾಹುಲ್ ಗಾಂಧಿ, ಮಠದ ಬಗ್ಗೆ ಗೌರವ ಭಾವನೆ ಇರಿಸಿಕೊಂಡಿದ್ದಾರೆ ಎಂದರು.
ಇದೊಂದು ರಾಜಕೀಯೇತರ ಭೇಟಿಯಾಗಿದ್ದು, ಅವರ ತಾಯಿಯವರಾದ ಶ್ರೀಮತಿ ಸೋನಿಯಾಗಾಂಧಿ ಸಹ ಈ ಹಿಂದೆ ಹಿರಿಯ ಶ್ರೀಗಳ ಸಮ್ಮುಖದಲ್ಲಿಯೇ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಹಾದಿಯಲ್ಲಿಯೇ ಅವರ ಮಗನೂ ಸಹ ಶ್ರೀಗಳ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ. ಇದು ರಾಜಕೀಯ ಹೊರತಾದ ಭೇಟಿ ಎಂದು ಹೇಳಿದರು.