ಟ್ವೀಟರ್ ನಂತರ ಬ್ಲೂ ಟಿಕ್ ಗಾಗಿ ಹಣ ತೆಗೆದುಕೊಳ್ಳಲು ಮುಂದಾದ ಫೇಸ್ ಬುಕ್ ಇನ್ಸ್ಟಾಗ್ರಾಂ….
ಟ್ವಿಟರ್ ನಂತರ, ಇದೀಗ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಕೂಡ ಬ್ಲೂ ಟಿಕ್ ವೆರಿಫಿಕೆಶನ್ ಗಾಗಿ ಹಣವನ್ನ ವಿಧಿಸಲು ಮುಂದಾಗಿದೆ. ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಭಾನುವಾರ ತಡರಾತ್ರಿ ಚಂದಾದಾರಿಕೆ ಸೇವೆಯನ್ನ ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಪ್ರಸ್ತುತ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಬಳಕೆದಾರರಿಗೆ ಪ್ರಾಯೋಗಿಕ ಆಧಾರದ ಮೇಲೆ ಹೊರತರಲಾಗುತ್ತಿದೆ. ಪ್ರಾಯೋಗಿಕ ಪರೀಕ್ಷೆಯ ಬಳಿಕ ಅಮೆರಿಕಾದಲ್ಲಿ ಲಾಂಚ್ ಆಗಲಿದೆ.
ಈ ವಾರ ನಾವು ಮೆಟಾ ವೆರಿಫೈಡ್ ಸೇವೆಯನ್ನು ಪ್ರಾರಂಭಿಸುತ್ತಿದ್ದೇವೆ ಇದು ಚಂದಾದಾರಿಕೆ ಸೇವೆಯಾಗಿದೆ. ಇದರಲ್ಲಿ, ನೀವು ಸರ್ಕಾರಿ ಗುರುತಿನ ಚೀಟಿಯ ಮೂಲಕ ಬ್ಲೂ ಟಿಕ್ ಪಡೆಯುತ್ತಿರಾ. ಇದು ನಿಮ್ಮ ಅಕೌಂಟ್ ಗೆ ಹೆಚ್ಚುವರಿ ರಕ್ಷಣೆ ಮತ್ತು ಹಲವು ಹೆಚ್ಚುವರಿ ಫೀಚರ್ಸ್ ಗಳನ್ನ ಒದಗಿಸುತ್ತದೆ ಎಂದು ಮಾರ್ಕ ಜಕರ್ ಬರ್ಗ್ ಬರೆದುಕೊಂಡಿದ್ದಾರೆ.
‘ನಾವು ಈ ವಾರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಈ ಸೇವೆಯನ್ನ ಪ್ರಾರಂಭಿಸುತ್ತೇವೆ. ಇದರ ನಂತರ, ಶೀಘ್ರದಲ್ಲೇ ಇದು ಇತರ ದೇಶಗಳಲ್ಲಿಯೂ ಹೊರತರಲಿದೆ. ಇದಕ್ಕಾಗಿ, ಬಳಕೆದಾರರು ವೆಬ್‌ಗೆ ತಿಂಗಳಿಗೆ $ 11.99 ಪಾವತಿಸಬೇಕಾಗುತ್ತದೆ (ಸುಮಾರು 1000 ರೂಪಾಯಿಗಳು). iOS ಬಳಕೆದಾರರಿಗೆ $ 14. 99, (1,200 ರೂಪಾಯಿಗಳಿಗಿಂತ ಹೆಚ್ಚು) ನಿಗದಿಪಡಿಸಿಲಾಗಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಈ ಸೇವೆಯನ್ನು ಯಾವಾಗ ಜಾರಿಗೆ ತರಲಾಗುತ್ತದೆ ಎಂಬ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಇತ್ತೀಚೆಗೆ, ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ನ ಮೂಲ ಕಂಪನಿಯಾದ ಮೆಟಾ ಪ್ಲಾಟ್‌ಫಾರ್ಮ್ಸ್ ತನ್ನ 11,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿಯ 18 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಇಷ್ಟು ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನ ವಜಾಗೊಳಿಸಿತ್ತು.
Mark Zuckerberg: Facebook, Instagram to take money for Blue Tick after Twitter…








