Marriage Certificate : ಗ್ರಾಮ ಪಂಚಾಯ್ತಿಯಲ್ಲೇ ಮದುವೆ ಸರ್ಟಿಫಿಕೇಟ್
ವಿವಾಹ ನೊಂದಣಿ ಅಧಿಕಾರ ಪಿಡಿಓಗಳಿಗೆ ನೀಡಿದ ಸರ್ಕಾರ
ಈವರೆಗೂ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆ ನೋಂದಣಿಗೆ ಅವಕಾಶ ಇತ್ತು
ಪಿಡಿಓಗೆ ಮದುವೆ ನೋಂದಣಿ ಅಧಿಕಾರ
ಸರ್ಕಾರವು ಹೊಸ ಆದೇಶವೊಂದನ್ನ ಹೊರಡಿಸಿದ್ದು , ಇದರ ಅನ್ವಯ ಇನ್ಮುಂದೆ ಗ್ರಾಮ ಪಂಚಾಯ್ತಿಯಲ್ಲೇ ಮದುವೆ ಸರ್ಟಿಫಿಕೇಟ್ ಸಿಗಲಿದೆ.
ಹೌದು..! ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಸರ್ಕಾರ ವಿವಾಹ ನೊಂದಣಿ ಅಧಿಕಾರವನ್ನು ಪಿಡಿಓಗಳಿಗೆ ನೀಡಿದೆ. ಇನ್ಮುಂದೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮದುವೆ ನೋಂದಣಿಗೆ ಅವಕಾಶ ನೀಡಲಾಗುತ್ತಿದೆ.
ಇಷ್ಟು ದಿನ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆ ನೋಂದಣಿಗೆ ಅವಕಾಶ ಇತ್ತು. ಮದುವೆ ನಡೆದ ಸ್ಥಳ ಅಥವ ಪತಿ-ಪತ್ನಿಯರು ವಾಸಿಸುವ ಸ್ಥಳದ ಅಧಿಕಾರ ವ್ಯಾಪ್ತಿ ಹೊಂದಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಿತ್ತು. ಅದಕ್ಕೆ ಅಗತ್ಯವಾದ ಅರ್ಜಿ ನಮೂನೆ ಅದೇ ಕಚೇರಿಯಲ್ಲಿ ದೊರೆಯುತ್ತಿತ್ತು.
ಈ ಅರ್ಜಿಯನ್ನು ತುಂಬಿ ನಂತರ ಮೂವರು ಸಾಕ್ಷಿಗಳು ಸಹಿ ಮಾಡಬೇಕಿತ್ತು. ಈ ಅರ್ಜಿಗೆ ವಧು-ವರ ಕೂಡ ಸಹಿ ಮಾಡಿ, ನಂತರ ಅದಕ್ಕೆ ಮೊಹರು ಹಾಕಿ ರಿಜಿಸ್ಟ್ರಾರ್ ಸಹಿ ಮಾಡುತ್ತಿದ್ದರು. ಆದರೆ ಇನ್ಮುಂದೆ ಗ್ರಾಮ ಪಂಚಾಯತಿ ಪಿಡಿಓಗೆ ಮದುವೆ ನೋಂದಣಿ ಅಧಿಕಾರವನ್ನು ಸರ್ಕಾರ ಕೊಟ್ಟಿದೆ.









