ಅಗಸ್ಟ್ ನಲ್ಲಿ ಡಿ.ಕೆ ಶಿ ಮಗಳು ಮತ್ತು ಕಾಫಿ ಡೇ ಸಿದ್ದಾರ್ಥ್ ಮಗನ ವಿವಾಹ ನಿಶ್ಚಿತಾರ್ಥ

ಬೆಂಗಳೂರು, ಜೂನ್ 13: ಕಾಫಿ ಡೇ ಸಂಸ್ಥಾಪಕ ದಿವಂಗತ ವಿಜಿ ಸಿದ್ದಾರ್ಥ್ ಅವರ ಹಿರಿಯ ಪುತ್ರ ಅಮರ್ತ್ಯ ಹೆಗ್ಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯ ಅವರ ವಿವಾಹ ನಿಶ್ಚಿತಾರ್ಥ ಅಗಸ್ಟ್ ನಲ್ಲಿ ನಡೆಯಲಿದೆ ಎಂದು ಮೂಲಗಳು ದೃಢಪಡಿಸಿವೆ.
ಇಂದು ಡಿಕೆ ಶಿವಕುಮಾರ್, ಎಸ್.ಎಂ ಕೃಷ್ಣ ಹಾಗೂ ಸಿದ್ದಾರ್ಥ್ ಕುಟುಂಬಗಳು ಎಸ್.ಎಂ ಕೃಷ್ಣ ಅವರ ನಿವಾಸದಲ್ಲಿ ಮದುವೆ ಮಾತುಕತೆ ನಡೆಸಿದ್ದು, ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.
ಅಮರ್ತ್ಯ ಮತ್ತು ಐಶ್ವರ್ಯ ಇಬ್ಬರು ಇಂಜಿನಿಯರಿಂಗ್ ಪದವೀಧರರಾಗಿದ್ದು, ಅಮರ್ತ್ಯ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ತಾಯಿಯೊಂದಿಗೆ ಕಂಪನಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ತಂದೆ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಈ ಮೂಲಕ ಬ್ಯುಸಿನೆಸ್ ಪಾರ್ಟನರ್ಸ್ ಆಗಿದ್ದ ಡಿಕೆಶಿ ಮತ್ತು ಸಿದ್ದಾರ್ಥ್ ಕುಟುಂಬ ಬೀಗರಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ನೇತೃತ್ವದಲ್ಲಿ ಈ ಮದುವೆ ನಡೆಯಲಿದೆ.








