ರೋಮ್ : ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ನಿಂದಾಗಿ ತಮ್ಮ ಮದುವೆ ಮುಂದೂಡಿದಕ್ಕೆ ವಧುಗಳು ಪ್ರತಿಭಟನೆ ನಡೆಸಿರುವ ಘಟನೆ ಇಟಲಿಯ ರೋಮ್ ಸಿಟಿಯಲ್ಲಿ ನಡೆದಿದೆ. ಸದ್ಯ ಪ್ರತಿಭಟನೆಯ ಫೋಟೋ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ಟ್ರೆವಿ ಫೌಂಟೇನ್ ಬಳಿ ವಧುವಿನಂತೆ ಸಿಂಗಾರಗೊಂಡ ಬಂದ ಯುವತಿಯರು ಕೊರೊನಾ ವಿರುದ್ಧ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಓರ್ವ ಯುವತಿ, ಈ ವರ್ಷ ನನ್ನ ಮದುವೆ ಫಿಕ್ಸ್ ಆಗಿತ್ತು. ಆದ್ರೆ ಕೊರೊನಾದಿಂದಾಗಿ ಮದುವೆ ದಿನಾಂಕ ಮುಂದಿನ ವರ್ಷ ಮುಂದೂಡಲಾಗಿದೆ. ಜೀವನದ ಸಮುಧರ ಕ್ಷಣಗಳು ಮುಂದೆ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.








