ನವದೆಹಲಿ: ಇಲ್ಲೊಬ್ಬಳು ಖತರ್ನಾಕ್ ಕಿಲಾಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಮಹಿಳೆ ಮೊದಲು ಮದುವೆಯಾಗಿ (Marriage) ನಂತರ ಗಂಡನ (Husband) ಜೊತೆ ಜಗಳ ಮಾಡುತ್ತಿದ್ದಳು. ಆನಂತರ ಪತಿಯ ಕುಟುಂಬದವರ ವಿರುದ್ಧ ಕೇಸ್ ಹಾಕುವುದಾಗಿ ಹೆದರಿಸಿ, ಪ್ರಕರಣದ ಇತ್ಯರ್ಥಕ್ಕಾಗಿ ಹಣ ಸುಲಿಗೆ ಮಾಡುವ ನಾಟಕವಾಡುತ್ತಿದ್ದಳು. ಇದೂ ಸಾಧ್ಯವಾಗದಿದ್ದರೆ ದೋಚಿ ಪರಾರಿಯಾಗುತ್ತಿದ್ದಳು. ಸದ್ಯ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹೀಗೆ 1.25 ಕೋಟಿ ರೂ. ದೋಚಿದ್ದ ಖತರ್ನಾಕ್ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಹಿಳೆ 10ಕ್ಕೂ ಅಧಿಕ ಪುರುಷರನ್ನು ಮದುವೆಯಾಗಿ ವಂಚಿಸಿರುವ ವಿಷಯ ಈಗ ಬೆಳಕಿಗೆ ಬಂದಿದೆ. ಅಲ್ಲದೇ, ಈಗಾಗಲೇ ಮಹಿಳೆಯಿಂದ ಒಟ್ಟು 1.25 ಕೋಟಿ ರೂ. ವಸೂಲಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೀಮಾ ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.