ಬೆಂಗಳೂರು : ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ, ಕೊವಿಡ್ ಗೆ ಲಸಿಕೆ ಬರುವವರೆಗೂ ಮುಂಜಾಗ್ರತಾ ಕ್ರಮಗಳೊಂದೇ ಕೊರೊನಾ ನಿಂದ ರಕ್ಷಿಸಲು ಇರುವ ಏಕೈಕ ಮಾರ್ಗವಾಗಿದೆ ಎಂದು ಕೆ.ಎಸ್.ಆರ್.ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಹೇಳಿದರು.
ಕೊವಿಡ್ -19 ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವ ಅವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಿಗಮದ ಕಾರ್ಯಾಗಾರದಲ್ಲಿಯೇ ತಯಾರಿಸಿರುವ ಮಾಸ್ಕ್ ಗಳನ್ನು ಸಿಬ್ಬಂದಿಗಳಿಗೆ ವಿತರಿಸಿದರು, ಬಳಿಕ ಮಾತನಾಡಿದ ಅವರು, ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಧರಿಸಬೇಕು. ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ, ಕೊವಿಡ್ ಗೆ ಲಸಿಕೆ ಬರುವವರೆಗೂ ಮುಂಜಾಗ್ರತಾ ಕ್ರಮಗಳೊಂದೇ ಕೊವಿಡ್ ನಿಂದ ರಕ್ಷಿಸಲು ಇರುವ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದರು.
ಎಲ್ಲಾ ಸಿಬ್ಬಂದಿಗಳಿಗೂ ಮಾಸ್ಕ್ ಗಳನ್ನು ನೀಡಲಾಗಿದೆ. ಯಾವುದೇ ಸಣ್ಣ ಪ್ರಮಾಣದ ತೊಂದರೆ ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಸಿಬ್ಬಂದಿಗಳ ಮತ್ತು ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆಯಾಗಬೇಕು.
ನಮ್ಮ ಬಸ್ಸುಗಳಲ್ಲಿನ ಪ್ರಯಾಣ ಸುರಕ್ಷತೆಯಿಂದ ಕೂಡಿದೆ ಎಂಬ ನಂಬಿಕೆಯನ್ನು ಸಾರ್ವಜನಿಕ ರಲ್ಲಿ ಮೂಡಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸ್ವಚ್ಚತಾ ಕ್ರಮಗಳು ಪರಿಣಾಮಕಾರಿಯಾಗಿರಬೇಕು. ನಿಗಮದಲ್ಲಿ ಇಂದು ಎಲ್ಲಾ ವಿಭಾಗಗಳಲ್ಲಿ ಮಾಸ್ಕ್ ದಿನ ಆಚರಿಸಲಾಗುತ್ತಿದೆ. ಇಂದಿಗೆ ಮಾತ್ರ ಇದು ಸೀಮಿತವಾಗದೆ ,ಜಾಗೃತಿ ನಿರಂತರವಾಗಿ ಜರುಗಬೇಕು ಎಂದು ತಿಳಿಸಿದರು.








