ರಕ್ಷಣಾ ಕಾರ್ಯಾಚರಣೆ ವೇಳೆ ಕೊಚ್ಚಿಹೋದ ಚನ್ನಬಸಪ್ಪ
ರಾಯಚೂರು: ಜಿಲ್ಲೆಯ ಮಸ್ಕಿ ಹಳ್ಳದ ನಡುಗಡ್ಡೆಯಲ್ಲಿ ಇಬ್ಬರು ಯುವಕರ ರಕ್ಷಣೆ ವೇಳೆ ಅಗ್ನಿಶಾಮಕದ ದಳದ ಸಿಬ್ಬಂದಿ ಯಡವಟ್ಟು ಮಾಡಿಕೊಂಡಿದ್ದಾರೆ.
ಮಸ್ಕಿ ಪಟ್ಟಣದ ನಡುವೆ ಹರಿಯುತ್ತಿರುವ ಮಸ್ಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಗ್ಗದ ಮೂಲಕ ನಡುಗಡ್ಡೆಯಲ್ಲಿ ಸಿಲುಕಿದ್ದ ಚನ್ನಬಸಪ್ಪ ಎಂಬಾತನ ರಕ್ಷಣೆಗೆ ಅಗ್ನಿಶಾಮಕದ ದಳದ ಸಿಬ್ಬಂದಿ ಮುಂದಾಗಿದ್ದಾರೆ.
ಚನ್ನಬಸಪ್ಪ ನಿಂತಿದ್ದ ಸ್ಥಳಕ್ಕೆ ಮೂವರು ಅಗ್ನಿಶಾಮಕದ ದಳದ ಸಿಬ್ಬಂದಿ ಹರಿಯುವ ನೀರಿನ್ನೂ ಲೆಕ್ಕಿಸದೇ ತಲುಪಿದ್ದರು. ಆದರೆ, ಚನ್ನಬಸಪ್ಪನಿಗೆ ಲೈಫ್ ಜಾಕೆಟ್ ನೀಡದೇ ಹಾಗೆಯೇ ಹಗ್ಗದ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಕರೆತರುತ್ತಿದ್ದರು.

ಮೂವರು ಅಗ್ನಿಶಾಮಕ ಸಿಬ್ಬಂದಿ ಪೈಕಿ ಇಬ್ಬರು ಮಾತ್ರ ಲೈಫ್ ಜಾಕೆಟ್ ಧರಿಸಿದ್ದರು. ನೀರಿನ ರಭಸದ ನಡುವೆಯೂ ಹಗ್ಗದ ಸಹಾಯದಿಂದ ಚನ್ನಬಸಪ್ಪನನ್ನು ಕರೆದು ತರುತ್ತಿದ್ದರು. ಈ ಹಂತದಲ್ಲಿ ಚನ್ನಬಸಪ್ಪ ಹಾಗೂ ಮೂವರು ಅಗ್ನಿಶಾಮಕ ಸಿಬ್ಬಂದಿ ನಿಯಂತ್ರಣ ತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಮೂವರ ಪೈಕಿ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ಮತ್ತೊಬ್ಬ ನಡುಗಡ್ಡೆ ಆಶ್ರಯ ಪಡೆದಿದ್ದಾರೆ. ಆದರೆ, ನೀರಿನಲ್ಲಿ ಕೊಚ್ಚಿಹೋದ ಚನ್ನಬಸವಣ್ಣನ ಸುಳುವು ಪತ್ತೆಯಾಗಿಲ್ಲ. ಹೀಗಾಗಿ ಆತನ ರಕ್ಷಣೆಗೂ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ವೇಳೆ ಚನ್ನಬಸಪ್ಪ ಕೊಚ್ಚಿ ಹೋಗಿದ್ದರಿಂದ ಮತ್ತೊಂದು ನಡುಗಡ್ಡೆಯಲ್ಲಿ ಸಿಲುಕಿದ ಜಲೀಲ್ ಹಗ್ಗದ ಮೂಲಕ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಸವಾಲಾಗಿ ಪರಿಣಮಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








