mass protest
ನ.30 ಡೆಡ್ ಲೈನ್ : ‘ಮರಾಠ ಅಭಿವೃದ್ಧಿ ಪ್ರಾಧಿಕಾರ’ ಹಿಂಪಡೆಯದಿದ್ರೆ ಸರಣಿ ಹೋರಾಟ ಕನ್ನಡಪರ ಸಂಘಟನೆಗಳಿಂದ ಎಚ್ಚರಿಕೆ..!
ಬೆಂಗಳೂರು : ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡಪರ ಸಂಘಟನೆಗಳು ಸರಣಿ ಹೋರಾಟಕ್ಕೆ ಸಜ್ಜಾಗಿವೆ. ಇನ್ನೂ ಮಸ್ಕಿ ಉಪ ಚುನಾವಣೆ ಹಿನ್ನಲೆಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡಪರ ಸಂಘಟನೆಗಳು ಸರಣಿ ಹೋರಾಟ ನಡೆಸಲು ತಯಾರಿ ನಡೆಸಿವೆ.
ಡಿಸೆಂಬರ್ 1ಕ್ಕೆ ಸಿಎಂ ನಿವಾಸಕ್ಕೆ ಮುತ್ತಿಗೆಗೆ ಕರೆ ನೀಡಲಾಗಿದೆ.
ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಗೂ ಕರೆ ನೀಡಲಾಗಿದೆ.
ಹೌದು ನವೆಂಬರ್ 30ರ ಒಳಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಆದೇಶವನ್ನು ಹಿಂಪಡೆಯದೇ ಇದ್ದರೇ, ಡಿಸೆಂಬರ್ 1ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ. ಅದಕ್ಕೂ ಮೀರಿ ಡಿಸೆಂಬರ್ 5ರಂದು ಕರ್ನಾಟಕ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸೋದಾಗಿಯೂ ಎಚ್ಚರಿಕೆ ನೀಡಿವೆ.
mass protest
ನಿಶ್ಚಿತಾರ್ಥಕ್ಕೆ ಹೊರಟವರು ಮಸಣ ಸೇರಿದರು: ಭೀಕರ ಅಪಘಾತದಲ್ಲಿ ನಾಲ್ವರು ಬಲಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








