ಲಕ್ನೋ: ಸಲೂನ್ನಲ್ಲಿ (Lucknow salon) ಕ್ಷೌರಿಕನೊಬ್ಬ ಗ್ರಾಹಕನ ಮುಖಕ್ಕೆ ಉಗುಳಿನಿಂದ ಮಸಾಜ್ (Spit Massage) ಮಾಡಿರುವ ಘಟನೆಯೊಂದು ಲಕ್ನೋದಲ್ಲಿ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಝೈದ್ ತನ್ನ ಕೈ ಮೇಲೆ ಉಗುಳುವುದು ಮತ್ತು ಗ್ರಾಹಕರ ಮುಖ ಉಜ್ಜಲು ಬಳಸಿರುವ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿಸೆರೆಯಾಗಿದೆ. ಆರೋಪಿ ಝೈದ್ ನ ಕೃತ್ಯದಿಂದ ಗ್ರಾಹಕನಿಗೆ ಅನುಮಾನ ಬಂದಿದೆ. ವಶಕ್ಕೆ ಪಡೆದ ಪೊಲೀಸರು ಸಲೂನ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಪರಿಶೀಲಿಸಿದ್ದಾರೆ. ಕ್ಷೌರಿಕ ತನ್ನ ಕೈಗೆ ಉಗುಳುವುದು ಮತ್ತು ಮುಖಕ್ಕೆ ಮಸಾಜ್ ಮಾಡಲು ಉಗುಳನ್ನು ಬಳಸುವುದನ್ನು ಕಂಡು ಪೊಲೀಸರು ಗಾಬರಿಗೊಂಡಿದ್ದಾರೆ.
ಗ್ರಾಹಕನ ದೂರಿನ ಆಧಾರದ ಮೇಲೆ ಲಕ್ನೋ ಪೊಲೀಸರು ಝೈದ್ನನ್ನು ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನೆ ನಡೆದು ಕೆಲ ದಿನಗಳಾದರೂ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕ್ಷೌರಿಕನ ಕಾರ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.