ADVERTISEMENT
Friday, June 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಬಯೋಮೆಟ್ರಿಕ್ ನೆಪದಲ್ಲಿ ಬಡವರ ಹೊಟ್ಟೆಗೆ ಹೊಡೆದ ಕೈ ಸರ್ಕಾರ: ತಾಯಂದಿರ ಕಿವಿಗೆ ಹೂವಿಟ್ಟ ಕಾಂಗ್ರೆಸ್ ಅಸಲಿ ಬಣ್ಣ ಬಯಲು ಎಂದ ಜೆಡಿಎಸ್

Shwetha by Shwetha
June 12, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಈಗ ಹೊಸ ನಿಯಮಗಳ ಸಂಕೋಲೆ ತೊಡಿಸಲಾಗಿದೆ. ಪ್ರತಿಯೊಬ್ಬ ಮನೆಯೊಡತಿಗೆ ಮಾಸಿಕ 2,000 ರೂಪಾಯಿ ನೀಡುವ ಈ ಯೋಜನೆಗೆ ಸರ್ಕಾರ ಈಗ ಬಯೋಮೆಟ್ರಿಕ್ ದೃಢೀಕರಣದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮೃತಪಟ್ಟ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ ಎಂಬ ತಾಂತ್ರಿಕ ಕಾರಣ ನೀಡಿ ಸರ್ಕಾರ ಈ ಹೆಜ್ಜೆ ಇಟ್ಟಿದ್ದರೂ, ಇದು ಈಗ ದೊಡ್ಡ ಮಟ್ಟದ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಈ ವಿಚಾರವಾಗಿ ಪ್ರತಿಪಕ್ಷ ಜೆಡಿಎಸ್ ಸೋಶಿಯಲ್ ಮೀಡಿಯಾ ಎಕ್ಸ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದೆ.

ಚುನಾವಣೆಯ ಸಂದರ್ಭದಲ್ಲಿ ಯಾವುದೇ ಷರತ್ತುಗಳಿಲ್ಲದೆ ಹಣ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬಂದ ಮೇಲೆ ತನ್ನ ಅಸಲಿ ಬಣ್ಣ ತೋರಿಸುತ್ತಿದೆ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ. ಬಡ ಮಹಿಳೆಯರಿಗೆ ಹಣ ತಲುಪದಂತೆ ಮಾಡಲು ಬಯೋಮೆಟ್ರಿಕ್ ಮತ್ತು ಸರ್ವರ್ ತಾಂತ್ರಿಕ ತೊಂದರೆಗಳ ನೆಪವೊಡ್ಡಲಾಗುತ್ತಿದೆ. ಈಗಾಗಲೇ 17 ಜಿಲ್ಲೆಗಳಲ್ಲಿ ಬರೋಬ್ಬರಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಯೋಜನೆಯಿಂದ ಹೊರಹಾಕುವ ಮೂಲಕ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

Related posts

ICUನಲ್ಲಿ ಕಾಂಗ್ರೆಸ್ ಶಾಸಕ ಷಡಕ್ಷರಿ; ಆರೋಗ್ಯ ಸ್ಥಿರ, ಪ್ರಾಣಾಪಾಯ ಇಲ್ಲ

ICUನಲ್ಲಿ ಕಾಂಗ್ರೆಸ್ ಶಾಸಕ ಷಡಕ್ಷರಿ; ಆರೋಗ್ಯ ಸ್ಥಿರ, ಪ್ರಾಣಾಪಾಯ ಇಲ್ಲ

June 12, 2026
₹39,000 ಕೋಟಿ ಕಸ ವಿಲೇವಾರಿ ಹಗರಣ? ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

₹39,000 ಕೋಟಿ ಕಸ ವಿಲೇವಾರಿ ಹಗರಣ? ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

June 12, 2026

ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಉತ್ತರವನ್ನು ಜೆಡಿಎಸ್ ತೀವ್ರವಾಗಿ ಟೀಕಿಸಿದೆ. ಯೋಜನೆಯ ಫಲಾನುಭವಿಗಳ ಕಡಿತದ ಬಗ್ಗೆ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರೆ, ತಮಗೆ ಈ ಬಗ್ಗೆ ಗೊತ್ತಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ರಾಜ್ಯದ ಆಡಳಿತ ನಡೆಸುವ ಸಿಎಂ ಅವರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಇಂತಹ ಗಂಭೀರ ಬದಲಾವಣೆಗಳ ಅರಿವಿಲ್ಲವೇ? ಅಥವಾ ಗೊತ್ತಿದ್ದೂ ನಾಟಕವಾಡುತ್ತಿದ್ದಾರೆಯೇ ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.

ಸುಮಾರು 5,000 ಕೋಟಿ ರೂಪಾಯಿ ಗೃಹಲಕ್ಷ್ಮಿ ಹಣವನ್ನು ಭ್ರಷ್ಟ ಸರ್ಕಾರ ನುಂಗಿ ಹಾಕಿದೆ ಎಂದು ಆರೋಪಿಸಿರುವ ಜೆಡಿಎಸ್, ಇದು ಕೇವಲ ಮತ ಬ್ಯಾಂಕ್ ಗಾಗಿ ಮಹಿಳೆಯರಿಗೆ ಮಾಡಿದ ವಂಚನೆಯಾಗಿದೆ ಎಂದು ಕಿಡಿಕಾರಿದೆ. ಅಧಿಕಾರ ಸಿಕ್ಕ ಮೇಲೆ ಮಹಿಳೆಯರನ್ನು ಅನರ್ಹರು ಎಂದು ಬೀದಿಗೆ ತಳ್ಳುವುದು ಯಾವ ರೀತಿಯ ಮಹಿಳಾ ಸಬಲೀಕರಣ ಎಂದು ಪ್ರಶ್ನಿಸಿದೆ. ಕೊಟ್ಟ ಮಾತಿಗೆ ತಪ್ಪಿದ ಕಾಂಗ್ರೆಸ್ ಸರ್ಕಾರ ಕೂಡಲೇ ನಾಡಿನ ತಾಯಂದಿರ ಕ್ಷಮೆಯಾಚಿಸಬೇಕು, ಜನತೆ ಈ ದ್ರೋಹವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.

ShareTweetSendShare
Join us on:

Related Posts

ICUನಲ್ಲಿ ಕಾಂಗ್ರೆಸ್ ಶಾಸಕ ಷಡಕ್ಷರಿ; ಆರೋಗ್ಯ ಸ್ಥಿರ, ಪ್ರಾಣಾಪಾಯ ಇಲ್ಲ

ICUನಲ್ಲಿ ಕಾಂಗ್ರೆಸ್ ಶಾಸಕ ಷಡಕ್ಷರಿ; ಆರೋಗ್ಯ ಸ್ಥಿರ, ಪ್ರಾಣಾಪಾಯ ಇಲ್ಲ

by Shwetha
June 12, 2026
0

ತಿಪಟೂರು ಕ್ಷೇತ್ರದ ಕಾಂಗ್ರೆಸ್ ಶಾಸಕ K. ಷಡಕ್ಷರಿ ಅವರು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ....

₹39,000 ಕೋಟಿ ಕಸ ವಿಲೇವಾರಿ ಹಗರಣ? ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

₹39,000 ಕೋಟಿ ಕಸ ವಿಲೇವಾರಿ ಹಗರಣ? ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

by Shwetha
June 12, 2026
0

ಕರ್ನಾಟಕ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದು, ಬೆಂಗಳೂರಿನಲ್ಲಿ ಕಸ ವಿಲೇವಾರಿ ಯೋಜನೆ ಹೆಸರಿನಲ್ಲಿ ₹39,000 ಕೋಟಿ ಮೌಲ್ಯದ ಹಗರಣ ನಡೆದಿದೆ...

₹6,000 ಕೊಟ್ಟರೆ ಫೇಲ್ ಆದರೂ ಪಾಸ್? VSKUನಲ್ಲಿ ಭಾರೀ ಅಕ್ರಮ ಆರೋಪ

₹6,000 ಕೊಟ್ಟರೆ ಫೇಲ್ ಆದರೂ ಪಾಸ್? VSKUನಲ್ಲಿ ಭಾರೀ ಅಕ್ರಮ ಆರೋಪ

by Shwetha
June 12, 2026
0

ಬಳ್ಳಾರಿಯ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ (VSKU)ಯಲ್ಲಿ ಹಣ ಪಡೆದು ವಿದ್ಯಾರ್ಥಿಗಳನ್ನು ಪಾಸ್ ಮಾಡಿಸುವ ಬೃಹತ್ ದಂಧೆಯೊಂದು ಬೆಳಕಿಗೆ ಬಂದಿರುವ ಆರೋಪ ಕೇಳಿಬಂದಿದೆ. ಹಲವು ವರ್ಷಗಳಿಂದ ಈ...

ರಾಜಕೀಯದಲ್ಲಿ ದುಡಿದವರಿಗೆ ಕೂಲಿ ಗ್ಯಾರಂಟಿ, ನನಗಿನ್ನೂ ವಯಸ್ಸಿದೆ ಕಾಯುವೆ: ಸಿದ್ದರಾಮಯ್ಯ ಜೊತೆಗಿನ ಮುನಿಸಿನ ವದಂತಿಗೆ ತೆರೆ ಎಳೆದ ಸಾಹುಕಾರ್ ಸತೀಶ್ ಜಾರಕಿಹೊಳಿ

ರಾಜಕೀಯದಲ್ಲಿ ದುಡಿದವರಿಗೆ ಕೂಲಿ ಗ್ಯಾರಂಟಿ, ನನಗಿನ್ನೂ ವಯಸ್ಸಿದೆ ಕಾಯುವೆ: ಸಿದ್ದರಾಮಯ್ಯ ಜೊತೆಗಿನ ಮುನಿಸಿನ ವದಂತಿಗೆ ತೆರೆ ಎಳೆದ ಸಾಹುಕಾರ್ ಸತೀಶ್ ಜಾರಕಿಹೊಳಿ

by Shwetha
June 12, 2026
0

ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಎಲ್ಲಾ ಊಹಾಪೋಹಗಳಿಗೆ ಇದೀಗ ಖುದ್ದು ಸಾಹುಕಾರ್...

ಕಸದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ!:ಕಾಗದದ ತುಂಡೂ ಇಲ್ಲ ಬರಿ ಸುಳ್ಳು ಆರೋಪ ;ಸಾಕ್ಷ್ಯ ತೋರಿಸಿ ಅಶೋಕ್ ಅವರೇ – ಪ್ರಿಯಾಂಕ್ ಖರ್ಗೆ

ಕಸದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ!:ಕಾಗದದ ತುಂಡೂ ಇಲ್ಲ ಬರಿ ಸುಳ್ಳು ಆರೋಪ ;ಸಾಕ್ಷ್ಯ ತೋರಿಸಿ ಅಶೋಕ್ ಅವರೇ – ಪ್ರಿಯಾಂಕ್ ಖರ್ಗೆ

by Shwetha
June 12, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ 39 ಸಾವಿರ ಕೋಟಿ ರೂಪಾಯಿ ಹಗರಣದ ಆರೋಪ ಹೊಸ ಸಂಚಲನ ಮೂಡಿಸಿದೆ. ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram