ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ನಾಳೆ ಬೃಹತ್ ಪ್ರತಿಭಟನೆ
ಬಳ್ಳಾರಿ : ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ನಾಳೆ ಬಳ್ಳಾರಿಯಲ್ಲಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ರೀತಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ನಗರದ ನಾರಾಯಣರಾವ್ ಪಾರ್ಕ್ ನಿಂದ ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ.
ಗಡಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲೆ ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚನೆ ಅಗತ್ಯತೆ ಇಲ್ಲ ಎಂಬ ಬಗ್ಗೆ ಅರಿವು ಮೂಡಿಸುವ ಮನವಿ ಪತ್ರವನ್ನು ಪ್ರತಿಭಟನಾಕಾರರು ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿಕ್ಕೆ ಸಲ್ಲಿಸಲಿದ್ದಾರೆ.
ಈ ಹೋರಾಟದಲ್ಲಿ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗಾರಜ್, ಸಾ.ರಾ.ಗೋವಿಂದ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಮಹಿಳೆಗೆ ಗುದ್ದಿ, ತಡೆಯಲು ಯತ್ನಿಸಿದ ವ್ಯಕ್ತಿ ಎಳೆದೊಯ್ದ ಕಾರು ಚಾಲಕ..! ವಿಡಿಯೋ ವೈರಲ್
ಇದರ ಪೂರ್ವಭಾಗವಾಗಿ, ಇಂದು ನಾರಾಯಣ ರಾವ್ ಪಾರ್ಕ್ ನಲ್ಲಿ ಹೋರಾಟ ಸಮಿತಿಯ ಮುಖಂಡರುಗಳು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಕೆಲವರು ನಾವು ದಿಟ್ಟ ಹೋರಾಟ ಮಾಡುವ ಸರ್ಕಾರಕ್ಕೆ ಎಚ್ಚರಿಕೆ ತರುವ ರೀತಿಯಲ್ಲಿ ಹೋರಾಟ ಮಾಡುವ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೋರಾಟಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅದಕ್ಕೆ ನಾವು ಹೆದರದೆ, ಬೆದರದೆ ಜೈಲಿಗೆ ಕಳಿಸದರೂ ಬೇಲ್ ತೆಗೆದುಕೊಳ್ಳದೆ ಅಲ್ಲಿಯೇ ಇರುವ ನಿಟ್ಟಿನಲ್ಲಿ ಹೋರಾಟ ತೂಪಿಸೋಣ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









