ಬಳ್ಳಾರಿ : ಬಳ್ಳಾರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೂರಾರು ಆರೋಗ್ಯ ಸಹಾಯಕರು (ಗುತ್ತಿಗೆ- ಹೊರಗುತ್ತಿಗೆ) ಸೇವೆಯನ್ನ ಕಾಯಂಗೊಳಿಸಬೇಕು ಹಾಗೂ ಸೇವಾಭದ್ರತೆಯನ್ನ ಒದಗಿಸಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಆವರಣದಲ್ಲಿ ಜಮಾಯಿಸಿದ ನೂರಾರು ಆರೋಗ್ಯ ಸಹಾಯಕರು, ನಮಗೆ ಚಪ್ಪಾಳೆ ಬೇಡ, ಸರ್ಕಾರ ಸೌಲಭ್ಯ ಕೊಡಿ ಘೋಷವಾಕ್ಯದ ನಾಮಫಲಕಗಳನ್ನ ಪ್ರದರ್ಶಿಸುವ ಮುಖೇನ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಭಾರತೀಯ ಮಜ್ದೂರ್ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನೂರಾರು ಆರೋಗ್ಯ ಸಹಾಯಕರೆಲ್ಲರೂ ಕೂಡ ಒಗ್ಗಟ್ಟಿನ ಮಂತ್ರವನ್ನ ಜಪಿಸಿದ್ರು. ನಾವೆಲ್ಲರೂ ಒಗ್ಗೂಡಿದ್ರೆ ಏನೆಲ್ಲಾ ಸಾಧಿಸಬಹುದು. ಹೀಗಾಗಿ, ಯಾರೊಬ್ಬರೂ ಕೂಡ ಗಾಳಿ ಸುದ್ದಿಗೆ ಕಿವಿಗೊಡಬಾರದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಡಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ 30,000 ಆರೋಗ್ಯ ಸಹಾಯಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅಗತ್ಯ ಸೇವಾ ಭದ್ರತೆ ಯನ್ನ ಒದಗಿಸಬೇಕೆಂದು ಹೊರಗುತ್ತಿಗೆ ಆರೋಗ್ಯ ಸಹಾಯಕ ರಾದ ಜಾನ್ ಹಾಗೂ ಶರತ್ ಒತ್ತಾಯಿಸಿದ್ದಾರೆ.








