ಬೆಂಗಳೂರು : ಮಾಸಿಕ 12 ಸಾವಿರ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನಾಳೆ ಆಶಾ ಕಾರ್ಯಕರ್ತೆರು ಬೆಂಗಳೂರಿನಲ್ಲಿ ಬೃಹತ್ ಧರಣಿ ನಡೆಸಲಿದ್ದಾರೆ.
ಈ ಕುರಿತು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಮಾಹಿತಿ ನೀಡಿದ್ದಾರೆ.
ಕೊರೊನಾ ಸಂಕಷ್ಟದ ನಡುವೆಯೂ ಆಶಾ ಕಾರ್ಯಕರ್ತೆಯರು ಮುಂಚೂನಿಯಲ್ಲಿದ್ದು ಶ್ರಮಿಸಿದ್ದಾರೆ.
ಆದ್ರೆ ಸರ್ಕಾರ ಕೆಲಸಕ್ಕೆ ಸರಿಯಾದ ವೇತನ ನೀಡುತ್ತಿಲ್ಲ. ಈ ಹಿಂದೆ ಹಲವು ಬಾರೀ ಮುಷ್ಕರ ನಡೆಸಿದರೂ ಸರ್ಕಾರ ಭರಸೆಯನ್ನು ಬಿಟ್ಟು ಬೇಡಿಕೆ ಈಡೇರಿಸಿಲ್ಲ. ಅನಿವಾರ್ಯವಾಗಿ ಈಗ ಪ್ರತಿಘಟನೆ ನಡೆಸುತ್ತೇವೆ.
ಮಾಸಿಕ ವೇತನ ಏರಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಶಾ ಕಾರ್ಯಕರ್ತೆಯರು ಧರಣಿ ಮಾಡಲಿದ್ದಾರೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ದುಡಿಯುವ ವರ್ಗದ ನೋವು ತಿಳಿಸಲು ಆಶಾ ಕಾರ್ಯಕರ್ತೆಯರು ಬೀದಿಗಿಳಿಯಲಿದ್ದು, ರಾಜ್ಯ ಮಟ್ಟದ ಆಶಾ ಕಾರ್ಯಕರ್ತರ ಪ್ರತಿಭಟನೆ ನಡೆಯಲಿದೆ.
ಮಾಸಿಕ 12 ಸಾವಿರ ವೇತನ ನಿಗದಿಗೆ ಆಗ್ರಹ ಮಾಡುತ್ತೇವೆ ಎಂದು ತಿಳಿಸಿದ್ದಾರೆ.