ದಳಪತಿ ವಿಜಯ್ ‘ಮಾಸ್ಟರ್’ ನಿನಿಮಾ ರೀಲೀಸ್ ಗೂ ಮುನ್ನವೇ ಲೀಕ್…!
ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟರ್ ಸಿನಿಮಾ ಇನ್ನೇ ಪೊಂಗಲ್ ಹಬ್ಬದ ಪ್ರಯುಕ್ತ ಇದೇ ತಿಂಗಳ 13 ರಂದು ರಿಲೀಸ್ ಆಗಲಿದೆ. ಆದ್ರೆ ಸಿನಿಮಾ ರಿಲೀಸ್ ಮುನ್ನವೇ ಲೀಕ್ ಆಗಿದ್ದು, ಸಿನಿಮಾದ ವಿಡಿಯೋಗಳನ್ನ ಕೆಲ ಕಿಡಿಗೇಡಿಗಳು ಹರಿ ಬಿಟ್ಟಿದ್ದು ವೈರಲ್ ಆಗಿದೆ. ಶೇ.50ಆಸದಲ್ಲೇ ಪ್ರೇಕ್ಷಕರಿಗೆ ಸಿನಿಮಾ ನೋಡಲು ಅವಕಾಶವಿರುವ ನಡುವೆಯೇ ಸಿನಿಮಾ ರಿಲೀಸ್ ಗೆ ಮಾಸ್ಟರ್ ತಂಡ ಮುಂದಾಗಿದೆ.
ಕೊರೊನಾ ಸಂಕಷ್ಟದ ಬಳಿಕ ಒಂದೊಂದೆ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಆದ್ರೆ ಚಿತ್ರರಂಗಕ್ಕೆ ಹ್ಯಾಕರ್ಸ್ ಗಳ ಕಾಟ ಶುರುವಾಗಿದೆ. ಇತ್ತೀಚಿಗೆ ಕನ್ನಡದ ಕೆಜಿಎಫ್-2 ಟೀಸರ್ ಸಹ ಲೀಕ್ ಆಗಿ, ಅವಧಿಗೂ ಮುನ್ನವೇ ಟೀಸರ್ ರಿಲೀಸ್ ಆಗಬೇಕಾಯ್ತು. ಇದೀಗ ಮಾಸ್ಟರ್ ಸಿನಿಮಾಗೂ ಹ್ಯಾಕರ್ಸ್ ಕಾಟ ಶುರುವಾಗಿದೆ.
ಬರೆದಿಟ್ಟುಕೊಳ್ಳಿ ಕೆಜಿಎಫ್ – 2 ಕ್ಲೈಮಾಕ್ಸ್ ಇದೇ.. never before ever after
ಅಂದ್ಹಾಗೆ ರಿಲೀಸ್ ಗೂ ಮೊದಲೇ ಸಿನಿಮಾದ ಇಂಟ್ರುಡಕ್ಷನ್ ದೃಶ್ಯ ಸೇರಿದಂತೆ ಪ್ರಮುಖ ದೃಶ್ಯಗಳು ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ. ಇದರಿಂದಾಗಿ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ ಈ ಕುರಿತಾಗಿ ವಿಡಿಯೋ ಒಂದನ್ನ ಶೇರ್ ಮಾಡಿರುವ ಚಿತ್ರತಂಡ ಸೋರಿಕೆಯಾದ ಕ್ಲಿಪ್ ಗಳನ್ನು ಶೇರ್ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದೆ. ಅಲ್ಲದೆ ಸಿನಿಮಾ ಲೀಕ್ ಆದ ಸೈಟ್ ಗಳನ್ನು ರಿಪೋರ್ಟ್ ಮಾಡುವಂತೆ ಕೇಳಿಕೊಂಡಿದೆ.
ನಿರ್ದೇಶಕ ಲೋಕೇಶ್ ಕನಗರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಾಸ್ಚರ್ ಸಿನಿಮಾಗಾಗಿ ಚಿತ್ರತಂಡ ಸುಮಾರು 1.5 ವರ್ಷದಿಂದ ಕಷ್ಟಪಟ್ಟಿದೆ. ನೀವೆಲ್ಲರೂ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡುತ್ತೀರಿ ಎಂದು ಭಾವಿಸುತ್ತೇನೆ. ಲೀಕ್ ಆದ ವಿಡಿಯೋವನ್ನು ಶೇರ್ ಮಾಡಬೇಡಿ. ಇನ್ನೊಂದು ದಿನ ಕಾಯಿರಿ. ಮಾಸ್ಟರ್ ನಿಮ್ಮ್ ಮುಂದೆ ಬರಲಿದೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel