Mata : ಸುಳ್ಳು ಪಬ್ಲಿಸಿಟಿ ನನಗೆ ಬೇಕಾಗಿಲ್ಲ – ರವೀಂದ್ರ ವಂಶಿ
ರವೀಂದ್ರ ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಹೊಸ ಮಠ ಸಿನಿಮಾದಲ್ಲಿ ಮೊದಲ ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್ ತಬಲಾ ನಾಣಿ, ಮಂಡ್ಯ ರಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ.
ಆದ್ರೆ ಈ ಸಿನಿಮಾದಲ್ಲಿ ಮಠದ ಸ್ವಾಮೀಜಿಗಳ ಬಗ್ಗೆ ಅವಮಾನ ಮಾಡಲಾಗಿದೆ ಎಂಬ ರೋಪಗಳಿದೆ.. ಇತ್ತೀಚೆಗೆ ಈ ಬಗ್ಗೆ ರಿಷಿ ಕುಮಾರ ಸ್ವಾಮೀಜಿಗಳು ಮಾತನಾಡುತ್ತಾ ಆಕ್ರೋಶ ಹೊರಹಾಕಿದ್ದರು..
ಕಾಂತಾರ ಸಿನಿಮಾವನ್ನ ಕೊಂಡಾಡಿ ರ9ಷಬ್ ಶೆಟ್ಟಿ ಕಾಲಿಗೆ ಬಿದ್ದು ಬರುವಂತೆ ಮಠ ನಿರ್ದೇಶಕರ ವಿರುದ್ಧ ಕಿಡಿಕಾರಿದ್ದರು..
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರತಂಡದ ವಿರುದ್ಧ ದೂರು ನೀಡಿರುವ ರಿಷಿಕುಮಾರ ಸ್ವಾಮೀಜಿ ಅವರು ಚಿತ್ರತಂಡದೊಂದಿಗೆ ಮುಖಾಮುಖಿಯಾಗಿಯೂ ಚರ್ಚಿಸಿದ್ದಾರೆ.
ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ನಿರ್ದೇಶಕ ರವೀಂದ್ರ ವಂಶಿ ನಾನು ಸುಮ್ಮನೆ ಸಿನಿಮಾ ಮಾಡಿಲ್ಲ, ನಾನು 149 ದಿನ, 70ಕ್ಕೂ ಹೆಚ್ಚು ಮಠಗಳಲ್ಲಿ ಶೂಟ್ ಮಾಡಿದ್ದೀನಿ. ನನಗೆ ಎಲ್ಲ ಧರ್ಮ, ಪರಂಪರೆಗಳ ಬಗ್ಗೆ ಗೌರವವಿದೆ.
ನೀವು ಮೊದಲು ಸಿನಿಮಾ ನೋಡಿ ಮಾತನಾಡಿ. ನಾನು ಸಾಕಷ್ಟು ಅಧ್ಯಯನ ಮಾಡಿಯೇ ಸಿನಿಮಾ ಮಾಡಿದ್ದೀನಿ. ನನ್ನ ಸಿನಿಮಾಗೆ ಚೀಪ್ ಪಬ್ಲಿಸಿಟಿ ಅಗತ್ಯವಿಲ್ಲ. ನನ್ನ ಚಿತ್ರಕ್ಕೆ ಸುಳ್ಳು ಪ್ರಚಾರ ಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.








