ಮಂಡ್ಯ : ಹೆಮ್ಮಾರಿ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆರೆ ಕಾಮೇಗೌಡರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಸಂಸದೆ ಸುಮಲತಾ ಹಾರೈಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ಇಡೀ ದೇಶಕ್ಕೆ ಮಾದರಿಯಾಗಿ ಅವರ ನಿಸ್ವಾರ್ಥ ಕೆಲಸಕ್ಕೆ ಮೆಚ್ಚಿ, ಸ್ವತಃ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರೆ ಕೊಂಡಾಡಿದ ನಮ್ಮ ಮಂಡ್ಯದ ಹೆಮ್ಮೆ ಶ್ರೀ ಕಾಮೇಗೌಡ ಅವರು ಕೊರೊನಾ ಸೋಂಕಿನಿಂದ ಬೇಗನೆ ಸಂಪೂರ್ಣ ಗುಣಮುಖರಾಗಲೆಂದು ಪ್ರಾರ್ಥಿಸುವೆ ಮತ್ತೆ ಆರೋಗ್ಯದಿಂದ ಅವರ ಸಾರ್ಥಕ ಜೀವನ ಹೀಗೆಯೇ ನೂರು ಕಾಲ ಸಾಗಲಿ ಎಂದು ಆಶಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರು ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಇದರ ಜೊತೆಗೆ ಕೊರೊನಾ ವೈರಸ್ ಸಹ ತಗುಲಿದೆ. ಸದ್ಯ ಅವರಿಗೆ ಮಂಡ್ಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.








