ಬಿಜೆಪಿ ಸೋಲುತ್ತದೆ : ಮಾಯಾವತಿ ಭವಿಷ್ಯ
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಎಸ್ ಪಿ , ಬಿಜೆಪಿ , ಕಾಂಗ್ರೆಸ್ ಭರ್ಜರಿ ಪ್ರಚಾರ ಆರಂಭಿಸಿದ್ದು, ಆರೋಪ ಪ್ರತ್ಯಾರೋಪಗಳನ್ನ ಮಾಡುತ್ತಿದ್ದಾರೆ.. ಈ ನಡುವೆ ಮಾಜಿ ಸಿಎಂ ಮಾಯಾಪತಿ , ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರಿ ಯಂತ್ರಗಳನ್ನು ದುರುಪಯೋಗಪಡಿಸಿಕೊಳ್ಳದೇ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿಜೆಪಿ ಸೋಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ..
ಹೌದು… ಚುನಾವಣಾ ಆಯೋಗದ ಭೀತಿಯಿಂದ ಸರ್ಕಾರಕ್ಕೆ ಯಂತ್ರಗಳು ಅಗತ್ಯ. ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ಖಾತ್ರಿ ಪಡಿಸಬೇಕು. ಸರ್ಕಾರಿ ಯಂತ್ರಗಳನ್ನು ದುರುಪಯೋಗಪಡಿಸಿಕೊಳ್ಳದಿದ್ದರೆ ಮತ್ತು ಮತಯಂತ್ರಗಳನ್ನು ದುರ್ಬಳಕೆ ಮಾಡದಿದ್ದರೆ ಬಿಜೆಪಿ ಈ ಚುನಾವಣೆಯಲ್ಲಿ ಸೋಲುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯು ಶಾಂತಿಯುತವಾಗಿ ನಡೆಯಬೇಕು. ಪೊಲೀಸರು ಪಕ್ಷಪಾತವಿಲ್ಲದೇ ಕಾರ್ಯನಿರ್ವಹಿಸಬೇಕು. ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಜನರು ಮತ ಹಾಕಬೇಕು. ನಮ್ಮ ಪಕ್ಷವು ಚುನಾವಣಾ ಆಯೋಗದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂದಿದ್ದಾರೆ.
ಫೆಬ್ರವರಿ 10 ರಿಂದ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಐದು ರಾಜ್ಯಗಳ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ.








