ಕಿರುತೆರೆಯ ಅಶ್ವಿನಿ ನಕ್ಷತ್ರದಲ್ಲಿ ಮಿಂಚಿ ಬಳಿಕ ಕೃಷ್ಣಲೀಲಾ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಬೊಂಬೆ ಮಯೂರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಯೂರಿಯವರ ಬರ್ತ್ ಡೇ ಪ್ರಯುಕ್ತ ಅವರ ಹೊಸ ಸಿನೆಮಾ ಆದ್ಯಂತದ ಫಸ್ಟ್ ಲುಕ್ ಅನ್ನ ಚಿತ್ರತಂಡ ಉಡುಗೊರೆಯಾಗಿ ನೀಡಿದೆ.

ಚಿತ್ರದ ಫಸ್ಟ್ ಲುಕ್ ಗೆ ಮುಯರಿ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಪ್ರಿಯರಲ್ಲೂ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಈ ಚಿತ್ರಕ್ಕೆ ರಮೇಶ್ ಬಾಬು ಬಂಡವಾಳ ಹೂಡಿದ್ದು, ಪುನೀತ್ ಶರ್ಮನ್ ಆಕ್ಷನ್ ಕಟ್ ಹೇಳಿದ್ದಾರೆ. ಆದ್ಯಂತ ಹೆಸರೇ ಹೇಳುವಂತೆ ವಿಭಿನ್ನ ಕಥಾಹಂದರ ಹೊಂದಿದ್ದು, ಮಹಿಳಾ ಪ್ರಧಾನ ಚಿತ್ರವಾಗಿದೆ. ಸಿನಿಮಾ ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿದೆ. ಆದ್ರೆ ಕೊರೊನಾ ಬಿಕ್ಕಟ್ಟಿನಿಂದಾಗಿ ಲಾಕ್ ಡೌನ್ ಆದ ಪರಿಣಾಮ ಚಿತ್ರದ ರಿಲೀಸ್ ಗೆ ಇನ್ನೂವರೆಗೂ ಡೇಟ್ ಫಿಕ್ಸ್ ಆಗಿಲ್ಲ.
ಆದ್ಯಂತ ಕಂಪ್ಲೀಟ್ ಥ್ರಿಲ್ಲಿಂಗ್ ಸಿನಿಮಾವಾಗಿದ್ದು, ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದ ಚಿತ್ರದ ನಾಯಕಿ ಕಾರಣಾಂತರಗಳಿಂದ ಸಕಲೇಶಪುರದ ಎಸ್ಟೇಟ್ ತಲುಪುತ್ತಾಳೆ. ಆದರೆ ಆ ಎಸ್ಟೇಟ್ ನಲ್ಲಿ ನಡೆಯುವ ಕೆಲ ವಿಚಿತ್ರ ಘಟನೆಗಳು ಆಕೆಯ ಉದ್ದೇಶಗಳನ್ನೇ ಬುಡಮೇಲು ಮಾಡುವ ವಿಭಿನ್ನ ಕಥೆ ಸಿನಿಮಾದಲ್ಲಿದೆ. ಹೀಗೆ ಡಿಫರೆಂಟ್ ಸ್ಟೋರಿ ಹೊಂದಿರುವ ಆದ್ಯಂತ ಚಿತ್ರದ ರಿಲೀಸ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.








