ಕರ್ನಾಟಕದ 6 ಮಂದಿ ಸೇರಿ ದೇಶದ 152 ಪೋಲಿಸ್ ಅಧಿಕಾರಿಗಳಿಗೆ ತನಿಖಾ ಶೇಷ್ಠತೆ ಪದಕ
2021 ನೇ ಸಾಲಿನಲ್ಲಿ ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳಿಗಾಗಿ ದೇಶದ 152 ಪೋಲಿಸ್ ಅಧಿಕಾರಿಗಳಿಗೆ ತನಿಖಾ ಶೇಷ್ಠತೆಯ ಪದಕ ನೀಡಿ ಗೌರವಿಸಲಾಗಿದೆ.. ಈ ಪೈಕಿ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಈ ಪದಕಕ್ಕೆ ಭಾಜನರಾಗಿದ್ದಾರೆ. ಪದಕ ಪಡೆದವರ ಪಟ್ಟಿ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆಯ ಪ್ರಕಾರ ಪದಕ ಪಡೆದವರ ಪೈಕಿ ದೇಶದ 28 ಮಹಿಳಾ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಸೇರಿದಂತೆ 152 ಪೊಲೀಸ್ ಅಧಿಕಾರಿಗಳಿಗೆ ತನಿಖಾ ಶ್ರೇಷ್ಠತೆಗಾಗಿ ಇರುವ ಕೇಂದ್ರ ಗೃಹ ಸಚಿವರ ಪದಕವನ್ನು ನೀಡಿ ಗೌರವಿಸಲಾಗಿದೆ.
ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟಕ್ಕಾಗಿ ದೇಶದಾದ್ಯಂತ ಒಟ್ಟು 152 ಪೊಲೀಸ್ ಅಧಿಕಾರಿಗಳಿಗೆ ಈ ಪದಕವನ್ನು ನೀಡಲಾಗಿದೆ. ಈ ಪ್ರಶಸ್ತಿಗಳನ್ನು ಪಡೆದ ಸಿಬ್ಬಂದಿಗಖಳ ಪೈಕಿ 15 ಮಂದಿ ಸಿಬಿಐ ವಿಭಾಗದವರಾಗಿದ್ರೆ 1 ಮಂದಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸರಾಗಿದ್ದಾರೆ. 10 ಮಂದಿ ಉತ್ತರ ಪ್ರದೇಶದಿಂದ, 9 ಮಂದಿ ಕೇರಳ ಮತ್ತು ರಾಜಸ್ಥಾನದಿಂದ, ತಮಿಳುನಾಡಿನಿಂದ 8, ಬಿಹಾರದಿಂದ ಏಳು, ಗುಜರಾತ್, ಕರ್ನಾಟಕ ಮತ್ತು ದೆಹಲಿಯಿಂದ ತಲಾ ಆರು ಮಂದಿ ಪೊಲೀಸ್ ಅಧಿಕಾರಿಗಳಿಗೆ ಈ ಪದಕ ಲಭಿಸಿದೆ. ಐವರು ಪೊಲೀಸ್ ಅಧಿಕಾರಿಗಳು ತೆಲಂಗಾಣದವರು, ತಲಾ ನಾಲ್ವರು ಅಸ್ಸಾಂ, ಹರಿಯಾಣ, ಒಡಿಶಾ ಮತ್ತು ಪಶ್ಚಿಮ ಬಂಗಾಳದವರಾಗಿದ್ದಾರೆ.








