Medicine Price Hike -ಏಪ್ರಿಲ್ 1 ಅಂದರೆ ಇಂದಿ ನಿಂದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಖ್ ನೀಡಿದೆ .
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದಿನಬಳಕೆಯ ವಸ್ತಗಳ ಹೊರೆಯ ನಡುವೆ ಇದಿಗ ಇನ್ನೊಂದು ಆಘಾತ ನೀಡಿದೆ .
ಹೌದು ಇಂದಿನಿಂದ ಸಾಮಾನ್ಯ ಬಳಕೆ ಔಷಧಿಗಳ ಬೆಲೆಯನ್ನು ಶೇ.12.12%ರಷ್ಟು ಹೆಚ್ಚಿಸಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (National List of Essential Medicines) ಅನುಮತಿ ನೀಡಿದೆ. ಈ ನಿರ್ಧಾರಕ್ಕೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ ಟ್ವೀಟ್ ಮಾಡಿದೆ.
ಆಕಾಶದೆತ್ತರಕ್ಕೆ ಏರಿರುವ ಅಗತ್ಯ ವಸ್ತುಗಳ ಬೆಲೆಯ ಮಧ್ಯೆ ಜನತೆಗೆ ಮತ್ತೊಂದು ಆಘಾತ ಕೊಡಲು @BJP4India ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸಾಮಾನ್ಯ ಬಳಕೆಯ ಔಷಧಿಗಳ ಬೆಲೆಯನ್ನು 12%ಕ್ಕೂ ಅಧಿಕವಾಗಿ ಹೆಚ್ಚಿಸಲು ಔಷಧ ಕಂಪನಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೈರಾಣಾಗಿರುವ ಜನತೆಯ ಮೇಲೆ ಮತ್ತೊಂದು ಹೊರೆ. 1/3 pic.twitter.com/mtdhPhnhDU
— Janata Dal Secular (@JanataDal_S) March 30, 2023
ಈ ವಿಷಯ ಕುರಿತು ಗುರುವಾರ ಟ್ವೀಟ್ ಮಾಡಿದ ಜೆಡಿಎಸ್,
“ಆಕಾಶದೆತ್ತರಕ್ಕೆ ಏರಿರುವ ಅಗತ್ಯ ವಸ್ತುಗಳ ಬೆಲೆಯ ಮಧ್ಯೆ ಜನತೆಗೆ ಮತ್ತೊಂದು ಆಘಾತ ಕೊಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸಾಮಾನ್ಯ ಬಳಕೆಯ ಔಷಧಿಗಳ ಬೆಲೆಯನ್ನು 12%ಕ್ಕೂ ಅಧಿಕವಾಗಿ ಹೆಚ್ಚಿಸಲು ಔಷಧ ಕಂಪನಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೈರಾಣಾಗಿರುವ ಜನತೆಯ ಮೇಲೆ ಮತ್ತೊಂದು ಹೊರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಯಾವೆಲ್ಲಾ ಔಷಧಿಗಳ ಮೇಲೆ ಬೆಲೆ ಹೆಚ್ಚಳ ಎಂದರೆ ನೋವು ನಿವಾರಕ, ಆ್ಯಂಟಿ ಬಯಾಟಿಕ್, ಉರಿಯೂತ ನಿವಾರಕ ಔಷಧಿ ಸೇರಿದಂತೆ ಜನಸಾಮಾನ್ಯರು ಹೆಚ್ಚು ಬಳಸುವ 800ಕ್ಕೂ ಅಧಿಕ ಔಷಧಿಗಳ ಬೆಲೆ ಇಂದಿನಿಂದ ಏರಿಕೆಯಾಗಲಿದೆ.
ಈ ಹಿಂದೆ ಅಂದರೆ ಕಳೆದ ವರ್ಷವೂ 10% ಕ್ಕಿಂತ ಹೆಚ್ಚು ಏರಿಸಲಾಗಿತ್ತು. ಆದರೆ ಇದೆ ಮೊಟ್ಟಮೊದಲ ಬಾರಿ ೧೨.೧೨% ರಷ್ಟು ಸಾಮಾನ್ಯ ಔಷಧಿಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿ ಟ್ವಿಟ್ ಮಾಡಿದೆ.
ಈ ಬೆಲೆಹೆಚ್ಚಳದ ಪಟ್ಟಿಯಲ್ಲಿ ಯಾವೆಲ್ಲಾ ಔಷದಿಗಳು ಇವೆ ಎಂದು ನೊಡುವುದಾದರೆ ಇವುಗಳಲ್ಲಿ
ಪ್ಯಾರಸಿಟಮಲ್ ಸೇರಿದಂತೆ 800ಕ್ಕೂ ಹೆಚ್ಚು ಅತ್ಯಗತ್ಯ ಔಷಧಗಳ ಬೆಲೆ ಏರಿಕೆಯಾಗಲಿದೆ.
ಪ್ರಮುಖವಾಗಿ ಅಲರ್ಜಿ,
ಸೋಂಕು,
ಜ್ವರ,
ಚರ್ಮ ರೋಗ,
ಹೃದಯ ಸಂಬಂಧಿ ಔಷದಧಿಗಳು ,
ರಕ್ತಹೀನತೆ,
ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಬಳಸುವ ಔಷಧಿಗಳ ಬೆಲೆಗಳು ಹೆಚ್ಚಾಗಲಿದೆ.
ಅಜಿಥ್ರೊಮೈಸಿನ್,
ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್,
ಮೆಟ್ರೋನಿಡಜೋಲ್,
ಪ್ಯಾರೆಸಿಟಮಾಲ್,
ಫೆನೋಬಾರ್ಬಿಟೋನ್
ಫೆನಿಟೋಯಿನ್ ಸೋಡಿಯಂನಂತಹ ಔಷಧಗಳ ಬೆಲೆ ಹೆಚ್ಚಳವಾಗಲಿ ಎಂದು ಹೇಳಲಾಗುತ್ತಿದೆ.