‘ಆತ್ಮಹತ್ಯೆಗೆ ಶರಣಾಗ್ತೀನಿ’…! ಟ್ವಿಟ್ಟರ್ ನಲ್ಲಿ ಗಳಗಳನೆ ಅತ್ತ ತಮಿಳು ನಟಿ ಮೀರಾ ಮಿಥುನ್..!
ತಮಿಳು ನಟಿ, ಮಾಡಲ್ ಮೀರಾ ಮಿಥುನ್ ಸಾಮಾಜಿಕ ಜಾಲತಾಣದಲ್ಲಿ 20 ನಿಮಿಷಗಳ ವಿಡಿಯೋವೊಂದನ್ನ ಪೊಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಹೌದು ವಿಡಿಯೋ ಹರಿಬಿಟ್ಟಿರುವ ನಟಿ ನನಗೆ ಖಿನ್ನತೆ ಕಾಡ್ತಿದೆ, ಸಾಮಾಜಿಕ ಜಾಲತಾಣದಲ್ಲಿ ನನಗೆ ಕಿರುಕುಳ ನೀಡಲಾಗಿದೆ, ಮಾನಸಿಕವಾಗಿ ನಾನು ಬಹಳ ನೊಂದಿದ್ದೇನೆ ಎಂದು ಕಣ್ಣೀರಾಕಿದ್ದಾರೆ.
ಟ್ವಿಟ್ಟರ್ನಲ್ಲಿ ಅಳಲು ತೋಡಿಕೊಂಡಿರುವ ನಟಿ , ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕಾಮೆಂಟ್ ಗಳು ನನ್ನನ್ನು ಸಾಯುವಂತೆ ಮಾಡುತ್ತಿದೆ. ಕೆಲವರನ್ನು ನನ್ನ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಸತ್ತು ಹೋಗು ಎಂದು ಹೀಯಾಳಿಸುತ್ತಿದ್ದಾರೆ. ನನಗೆ ಬದುಕಬೇಕು ಎಂದು ಅನಿಸುತ್ತಿಲ್ಲ ಎಂದು ನೊಂದುಕೊಂಡು ಮಾತನಾಡಿದ್ದಾರೆ.
ವಾವ್ಹಾ…! ಆಸ್ಪತ್ರೆ ಮೆನುವಿನಲ್ಲಿ ಚಿಕನ್ ಸಾಂಬಾರ್ : ರೋಗಿಗಳಿಗೆ ಮಾತ್ರ..!
ಸಾಮಾಜಿಕ ಜಾಲತಾಣದಲ್ಲಿ ನನಗೆ ನೀಡುತ್ತಿರುವ ಕಿರುಕುಳ ನಿಲ್ಲುವುದಿಲ್ಲ. ಈ ಬಗ್ಗೆ ನಾನು ಎಲ್ಲವೂ ದಾಖಲಿಸುತ್ತಿದ್ದೇನೆ, ಮಾನಸಿಕವಾಗಿ ನನ್ನ ಆರೋಗ್ಯ ಹದಗೆಡುತ್ತಿದೆ, ನನ್ನ ಸಾವಿಗೆ ಕಾರಣರಾದ ಪ್ರತಿಯೊಬ್ಬರನ್ನು ಗಲ್ಲಿಗೇರಿಸಬೇಕು ಎಂದು ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ದಾರೆ. ಕಳೆದ ಮೂರು ವರ್ಷದಿಂದ ನಿರಂತರವಾಗಿ ನಾನು ಖಿನ್ನತೆಗೆ ಒಳಗಾಗಿದ್ದೇನೆ. ಸಮಾಜದಲ್ಲಿ ನನಗೆ ಯಾವುದೇ ರೀತಿ ಗೌರವ ಕೊಡ್ತಿಲ್ಲ. ಪ್ರತಿಕ್ಷಣವೂ ನನಗೆ ಅನ್ಯಾಯವಾಗ್ತಿದೆ. ನನ್ನ ಈ ನೋವನ್ನು ಕೊನೆಯಾಗಿಸಲು ನಾನು ನಿರ್ಧರಿಸಿದ್ದೇನೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ.
ಮಹಾರಾಷ್ಟ್ರ : ಹೆತ್ತವರನ್ನು ನಿರ್ಲಕ್ಷ್ಯ ಮಾಡಿದ 7 ಉದ್ಯೋಗಿಗಳ ಸ್ಯಾಲರಿ ಕಟ್..!
ಅಲ್ದೇ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಗೂ ಫ್ಯಾಶನ್ ಇಂಡಸ್ಟ್ರಿಯಲ್ಲಿ ನನ್ನನ್ನು ತುಳಿಯಲಾಗಿದೆ. ನಾನು ಮಾಡಿದ ಕೆಲಸಗಳನ್ನು ಕಾಪಿ ಮಾಡಿದ್ದಾರೆ, ನನ್ನ ಸಾಧನೆಯನ್ನು ಗುರುತಿಸಿ, ಅದನ್ನು ತಾವೇ ಮಾಡಿರವಂತೆ ಕಾಪಿ ಮಾಡಿದ್ದಾರೆ. ನಾನು ತಮಿಳುನಾಡಿನಲ್ಲಿ ಹುಟ್ಟಿದ್ದರೂ, ಓರ್ವ ತಮಿಳು ಹುಡುಗಿಯಾಗಿದ್ದರೂ ನನಗೆ ತೊಂದರೆ ಕೊಟ್ಟಿದ್ದಾರೆ ಎಂದು ಆರೋಪಿಸಿ ಗಳಗಳನೆ ಅತ್ತಿದ್ದಾರೆ.
https://youtu.be/3BiE9LYyYjw
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel