MeeraBai ಭಾರತದ ಸ್ಟಾರ್ ವೇಟ್ ಲಿಫ್ಟರ್ ಮೀರಾಬಾಯಿಗೆ ಬೆಳ್ಳಿ
ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಗಾಯದ ಕಾರಣದಿಂದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದಿಂದ ವಂಚಿತರಾದರು. ಕೊಲಂಬಿಯಾದಲ್ಲಿ ನಡೆಯುತ್ತಿರುವ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಾನು ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಚಾನು 49 ಕೆಜಿ ತೂಕ ವಿಭಾಗದಲ್ಲಿ 200 ಕೆಜಿ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದರು.
ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ಮಾತ್ರ ಎತ್ತಲು ಇವರಿಗೆ ಸಾಧ್ಯವಾಯಿತು. ಚೀನಾದ ಜಿಯಾಂಗ್ ಹುಯಿಹುವಾ 206 ಕೆಜಿ ಭಾರ ಎತ್ತುವ ಮೂಲಕ ಚಿನ್ನ ಗೆದ್ದರು. ಜಿಯಾಂಗ್ ಸ್ನ್ಯಾಚ್‌ನಲ್ಲಿ 83 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ಎತ್ತಿದರು. ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ಹೌ ಝಿಹುವಾ 198 ಕೆಜಿ (89 ಕೆಜಿ+109 ಕೆಜಿ) ಎತ್ತುವ ಮೂಲಕ ಕಂಚಿನ ಪದಕ ಗೆದ್ದರು.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ನಂತರ, ಮೀರಾಬಾಯಿ ಚಾನು ಮೊದಲ ಬಾರಿಗೆ ಪ್ರಮುಖ ಪಂದ್ಯಾವಳಿಯಲ್ಲಿ ಭಾಗವಹಿಸಿದರು. ಚಾನುವಿನ ಸ್ನ್ಯಾಚ್ ಸೆಷನ್ ತುಂಬಾ ಕಳಪೆಯಾಗಿತ್ತು. ಅವರು ತಮ್ಮ ಮೊದಲ ಅವಕಾಶದಲ್ಲಿ 84 ಕೆಜಿ ಎತ್ತಿದರು. ಎರಡನೇ ಅವಕಾಶದಲ್ಲಿ ಬೆಳೆದ 87 ಕಿಲೋ ಎತ್ತಲು ವಿಫಲರಾದ್ರು. ಎರಡನೇ ಅವಕಾಶದಲ್ಲಿ 87 ಕೆಜಿ ಎತ್ತುವಾಗ ಅವರ ಕೈ ನಡುಗುತ್ತಿತ್ತು ಎಂದು ತೀರ್ಪುಗಾರರು ನಂಬಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮೀರಾ ಮೂರನೇ ಅವಕಾಶದಲ್ಲಿ 90 ಕೆಜಿ ತೂಕದ ಬದಲು 87 ಕೆಜಿ ತೂಕವನ್ನು ಮಾತ್ರ ಎತ್ತಿದರು.
ಕ್ಲೀನ್ ಅಂಡ್ ಜರ್ಕ್ ನಲ್ಲಿ ಅವರು ಮೊದಲ ಅವಕಾಶದಲ್ಲಿ 111 ಕೆಜಿ ಎತ್ತಿದರು. ಆದರೆ ಅದನ್ನು ಸರಿಯಾಗಿ ಪರಿಗಣಿಸಿಲ್ಲ. ಭಾರತದಿಂದ ಮನವಿ ಮಾಡಲಾಯಿತು. ಮತ್ತು ನಿರ್ಧಾರವನ್ನು ಎತ್ತಿಹಿಡಿಯಲಾಯಿತು. ಅವರು ಎರಡನೇ ಅವಕಾಶದಲ್ಲಿ 111 ಮತ್ತು ಮೂರನೇ ಅವಕಾಶದಲ್ಲಿ 113 ಎತ್ತಿದರು. ಸ್ನ್ಯಾಚ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರೆ, ಕ್ಲೀನ್ ಮತ್ತು ಜರ್ಕ್ ನಲ್ಲಿ ಚಿನ್ನ ಪಡೆದರು.
ಚಾನು 2017ರಲ್ಲಿ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಚಾನು ಬೆಳ್ಳಿ ಪದಕ ಗೆದ್ದ ನಂತರ ಕೋಚ್ ವಿಜಯ್ ಶರ್ಮಾ ಮಾತನಾಡಿ, ಈ ಸ್ಪರ್ಧೆಯ ಬಗ್ಗೆ ನಮಗೆ ಹೆಚ್ಚು ಆತಂಕವಿಲ್ಲ. ಅವರ ಗಾಯದ ಮೇಲೆ ನಮ್ಮ ಗಮನ ಎಂದಿದ್ದಾರೆ.
Meera Bhai won silver in weight lifting , saakshatv








