ದೆಹಲಿಯ ಬಂಟಿ-ಬಾಬ್ಲಿ ಜೋಡಿಯನ್ನು ಬಂಧಿಸಿದ ಮೀರತ್ ಪೊಲೀಸರು
ಹೊಸದಿಲ್ಲಿ, ಜುಲೈ 18: ದೆಹಲಿ-ಎನ್.ಸಿ.ಆರ್‌ನಲ್ಲಿ ದರೋಡೆ ನಡೆಸಿದ್ದಕ್ಕಾಗಿ ಮೀರತ್ ನ ದಂಪತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಾಲಿವುಡ್ ಚಲನಚಿತ್ರ ಬಂಟಿ ಬಾಬ್ಲಿಯಿಂದ ಸ್ಫೂರ್ತಿ ಪಡೆದು, ಈ ಜೋಡಿಗಳು ಸಹಾಯ ಕೇಳುವ ನೆಪ ಮಾಡಿಕೊಂಡು ಜನರ ಮನೆಗಳಿಗೆ ಪ್ರವೇಶಿಸುತ್ತಿದ್ದರು ಒಳಗೆ ಹೋದ ನಂತರ, ಚೂರಿ ತೋರಿಸಿ ಅವರನ್ನು ಬೆದರಿಸಿ ದೋಚುತ್ತಿದ್ದರು.
ಗಾಂಧಿ ನಗರ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಇವರಿಬ್ಬರನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ, ಬಾಬಿ ಎಂದು ಗುರುತಿಸಲ್ಪಟ್ಟ ವ್ಯಕ್ತಿಯು ಹತ್ತಿರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಒಂದು ದಿನ ಅವರು ನೀರು ಕೇಳಿಕೊಂಡು ದೂರುದಾರರ ಮನೆಯ ಒಳಗೆ ಪ್ರವೇಶಿಸಿದರು. ದೂರುದಾರರು ಅವರಿಗೆ ನೀರು ಕೊಡಲು ಅಡುಗೆ ಕೋಣೆಗೆ ಪ್ರವೇಶಿಸಿದಾಗ, ವ್ಯಕ್ತಿಯು ಅವರಿಗೆ ಚೂರಿ ತೋರಿಸಿ ಬೆದರಿಸಿದರೆ, ಪಾಯಲ್ ಎಂಬ ಮಹಿಳೆ ಹಿಂದಿನಿಂದ ಅವರನ್ನು ಹಿಡಿದುಕೊಂಡಳು.
ನಂತರ ಕಪಾಟಿನ ಕೀಲಿ ಕೈಯನ್ನು ಬೆದರಿಸಿ ಪಡೆದುಕೊಂಡ ಅವರು ಹಣ, ಮೊಬೈಲ್ ಫೋನ್, ಬೆಳ್ಳಿ ವಸ್ತುಗಳು ಮತ್ತು ಉಂಗುರಗಳನ್ನು ತೆಗೆದುಕೊಂಡು ಓಡಿಹೋದರು.

ಕಳೆದ 13 ತಿಂಗಳಿನಿಂದ ಆರೋಪಿ ಬಾಬಿ ಕೆಲಸ ಮಾಡುತ್ತಿದ್ದ ಘಜಿಯಾಬಾದ್‌ನ ಮೆಹ್ರೌಲಿ ವಿಸ್ತರಣೆಯಲ್ಲಿ ಪೊಲೀಸರು ಹಲವಾರು ದಾಳಿಗಳನ್ನು ನಡೆಸಿದ್ದು, ದಂಪತಿಗಳು ಮೀರತ್‌ನಲ್ಲಿ ತಲೆಮರೆಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮೀರತ್‌ನ ಮಾವಾನಾದಿಂದ ಬಂಧಿಸಲಾಯಿತು ಮತ್ತು ಫೋನ್‌ಗಳು ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ದರೋಡೆ ಮಾಡಿದ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ








