Meerut : ಮದುವೆ ಮೆರವಣಿಗೆ ವೇಳೆ ಕಾರ್ ನುಗ್ಗಿ ಮೂವರು ಸಾವು
ಮದುವೆ ಮೆರವಣಿಗೆ ವೇಳೆ ನುಗ್ಗಿದ ಕಾರು
ಘಟನೆಯಲ್ಲಿ ಮೂವರು ಸಾವು
ಉತ್ತರಪ್ರದೇಶದ ಮೀರತ್ ನಲ್ಲಿ ಘಟನೆ
ಪಾನಮತ್ತ ಕಾರು ಚಾಲಕನ ಬಂಧನ
18 ವರ್ಷದ ಯುವಕ ಸ್ಥಳದಲ್ಲೇ ಸಾವು
ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಜಾನಿ ಬ್ಲಾಕ್ ನ ಸಿಸೌಲಾ ಖುರ್ದ್ ಗ್ರಾಮದಲ್ಲಿ ಗುರುವಾರ ಮದುವೆ ಮೆರವಣಿಗೆ ನಡೆಯುತ್ತಿದ್ದಾಗ ಅವರತ್ತ ವೇಗವಾಗಿ ಬಂದ ವ್ಯಾನ್ ಡಿಕ್ಕಿ ಹೊಡೆದಿದೆ.. ಪರಿಣಾಮ ಮೂವರು ಸಾವನಪ್ಪಿದ್ದು , ಹಲವರಿಗೆ ಗಾಯವಾಗಿದೆ..
18 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ (ಗ್ರಾಮೀಣ) ಅನಿರುದ್ಧ್ ಕುಮಾರ್ ಮಾತನಾಡಿ, ಮೀರತ್-ಬಾಗ್‌ಪತ್ ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿ ವಿವಾಹ ಸಮಾರಂಭವಿತ್ತು, ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಮೆರವಣಿಗೆ ಸ್ಥಳದ ಗೇಟ್‌ಗೆ ತಲುಪಿದಾಗ, ವೇಗವಾಗಿ ಬಂದ ವ್ಯಾನ್ ಲೇನ್ ಬದಲಿಸಿ ಬಂದು ಡಿಕ್ಕಿ ಹೊಡೆದಿದೆ. ಅದರಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬನನ್ನು ವರುಣ್ ಕುಮಾರ್ ಎಂದು ಗುರುತಿಸಲಾಗಿದೆ – XII ತರಗತಿಯ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಆದರೆ ಇಬ್ಬರು ಆಸ್ಪತ್ರೆಯಲ್ಲಿ ಗಾಯಗೊಂಡರು. ನಾವು ಆರೋಪಿ ಚಾಲಕನನ್ನು ಬಂಧಿಸಿದ್ದೇವೆ ಎಂದಿದ್ದಾರೆ..
ಆರೋಪಿಯು ಪಾನಮತ್ತನಾಗಿದ್ದ ಎಂದೂ ಕೂಡ ಪೊಲೀಸರು ತಿಳಿಸಿದ್ದಾರೆ.
Meerut , Three killed in wedding procession by van








