Mega Blockbuster | “ಮೆಗಾ ಬ್ಲಾಕ್ಬಸ್ಟರ್” ಗುಟ್ಟೇನು..?
ಮೆಗಾಬ್ಲಾಕ್ ಬಸ್ಟರ್ ಪೋಸ್ಟರ್ ಶೇರ್
ಮೆಗಾಬ್ಲಾಕ್ ಬಸ್ಟರ್ ಕಪೀಲ್ ಶರ್ಮಾ ಸಿನ್ಮಾ
ಪೋಸ್ಟರ್ ಶೇರ್ ಮಾಡಿಕೊಂಡ ಕ್ರಿಕೆಟರ್ಸ್
ಕಪಿಲ್ ಶರ್ಮಾ ಸಿನಿಮಾಗೆ ಸ್ಟಾರ್ಸ್ ಸಾಥ್
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮೆಗಾಬ್ಲಾಕ್ ಬಸ್ಟರ್ ಪೋಸ್ಟರ್ ಭಾರಿ ಸದ್ದು ಮಾಡುತ್ತಿದೆ.
ಸಿನಿ ಸ್ಟಾರ್ಸ್ ಜೊತೆಗೆ ದಿಗ್ಗಜ ಕ್ರಿಕೆಟರ್ಸ್ ಕೂಡ ಮೆಗಾಬ್ಲಾಕ್ ಬಸ್ಟರ್ ಪೋಸ್ಟರ್ ಅನ್ನ ಶೇರ್ ಮಾಡಿಕೊಂಡಿದ್ದು, ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದಾರೆ.
ಕಪಿಲ್ ಶರ್ಮಾ, ತ್ರಿಶಾ, ರಶ್ಮಿಕಾ ಮಂದಣ್ಣ, ಕಾರ್ತಿ, ದೀಪಿಕಾ ಪಡುಕೋಣೆ, ರೋಹಿತ್ ಶರ್ಮಾ, ಸೌರವ್ ಗಂಗೂಲಿ ಸೇರಿದಂತೆ ಹಲವರು ಮೆಗಾಬ್ಲಾಕ್ ಬಸ್ಟರ್ ಪೋಸ್ಟರ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಮೆಗಾ ಬ್ಲಾಕ್ ಬಸ್ಟರ್ ಅಂದರೇ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದಕ್ಕೆ ಉತ್ತರವೆಂಬಂತೆ ಕಪಿಲ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ಮೆಗಾ ಬ್ಲಾಕ್ ಬಸ್ಟರ್ ಅನ್ನೋದು ನಾನು, ತ್ರಿಶಾ, ರಶ್ಮಿಕಾ ಮಂದಣ್ಣ, ದೀಪಿಕಾ, ಕಾರ್ತಿ ನಟನೆಯ ಸಿಕ್ರೇಟ್ ಪ್ರಾಜೆಕ್ಟ್ ಹೆಸರಾಗಿದೆ. ಇದರ ಟ್ರೇಲರ್ ಸೆಪ್ಟೆಂಬರ್ ನಾಲ್ಕರಂದು ರಿಲೀಸ್ ಆಗಲಿದೆ. ಇದು ನನ್ನ ಅಭಿಮಾನಿಗಳಿಗೆ ನಿಮಗೆಲ್ಲ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಆದ್ರೂ ಈ ಬಗ್ಗೆ ಯಾವುದೇ ಸ್ಪಷ್ಟತೆ ನೆಟ್ಟಿಗರಿಗೆ ಸಿಕ್ಕಿಲ್ಲ. ಹೀಗಾಗಿ ಕೆಲವರು ಸಿನಿಮಾಗೆ ಶುಭವಾಗಲಿ ಎಂದು ಕಮೆಂಟ್ ಮಾಡುತ್ತಿದ್ದರೇ ಇನ್ನೂ ಕೆಲವರು ಯಾವುದೋ ಬ್ರ್ಯಾಂಡ್ ನ ಪ್ರಚಾರ ಎಂದು ಭಾವಿಸಿದ್ದಾರೆ. ಅಂದಹಾಗೆ ಕಪಿಲ್ ಶರ್ಮಾ ಅವರು ನಂದಿತಾ ದಾಸ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಶಹಾನಾ ಸ್ವಾಮಿ ಕೂಡ ನಟಿಸಲಿದ್ದಾರೆ.