“ಗಾಡ್ ಫಾದರ್” ನಲ್ಲಿ ಮೆಗಾಸ್ಟಾರ್ ಜೊತೆಯಾದ ಸಲ್ಮಾನ್ ಖಾನ್
ಮೆಗಾಸ್ಟಾರ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ ಪಡುವ ಸುದ್ದಿ ಬಂದಿದೆ. ನಟ ಚಿರಂಜೀವಿ ತಮ್ಮ ಮುಂದಿನ ಚಿತ್ರ ಗಾಡ್‌ಫಾದರ್ ನಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ ತೆರೆ ಹಂಚಿಕೊಳ್ಳಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಸಲ್ಮಾನ್ ಖಾನ್ ಅವರನ್ನು ಪುಷ್ಪಗುಚ್ಛದೊಂದಿಗೆ ಸೆಟ್ ಗೆ ಸ್ವಾಗತಿಸಿದ್ದಾರೆ. ಗಾಡ್‌ಫಾದರ್ ಸಿನಿಮಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು, ಮೋಹನ್ ರಾಜ ನಿರ್ದೇಶಿಸಿಸುತ್ತಿದ್ದಾರೆ. ಈ ಚಿತ್ರವು ಮಲಯಾಳಂನ ಸೂಪರ್‌ಹಿಟ್ ಚಿತ್ರ ಲೂಸಿಫರ್‌ನ ಅಧಿಕೃತ ತೆಲುಗು ರಿಮೇಕ್ .
ಚಿರಂಜೀವಿ ಅವರ ಗಾಡ್ ಫಾದರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವುದನ್ನ ನಾವು ಈ ಹಿಂದೆ ವರದಿ ಮಾಡಿದ್ದೆವು. ಮಾರ್ಚ್ 16 ರಂದು, ಸ್ವತಃ ಮೆಗಾ ಸ್ಟಾರ್ ಟ್ವಿಟರ್‌ನಲ್ಲಿ ಘೋಷಿಸುವ ಮೂಲಕ ಅದನ್ನು ಖಚಿತಪಡಿಸಿದರು.
ಆತ್ಮೀಯ ಸ್ನೇಹಿತ ಸಲ್ಮಾನ್ ಜೊತೆಗಿನ ಫೋಟೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡ ಚಿರಂಜೀವಿ, “#ಗಾಡ್‌ಫಾದರ್, ಭಾಯ್ ಸಲ್ಮಾನ್‌ಖಾನ್‌ಗೆ ಸ್ವಾಗತ! ನಿಮ್ಮ ಆಗಮನ ಎಲ್ಲರಿಗೂ ಶಕ್ತಿ ತುಂಬಿದೆ ಮತ್ತು ಉತ್ಸಾಹವು ಹಿಮ್ಮಡಿಯಾಗಿದೆ. ನಿಮ್ಮೊಂದಿಗೆ ತೆರೆ ಹಂಚಿಕೊಳ್ಳುವುದು ಖುಷಿ ತಂದಿದೆ. ಎಂದು ಟ್ವೀಟ್ ಮಾಡಿದ್ದಾರೆ.
https://twitter.com/KChiruTweets/status/1503941520260358147?ref_src=twsrc%5Etfw%7Ctwcamp%5Etweetembed%7Ctwterm%5E1503941520260358147%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fregional-cinema%2Fstory%2Fmegastar-chiranjeevi-welcomes-salman-khan-to-the-cast-of-godfather-calls-it-an-absolute-joy-1925875-2022-03-16
ಲೂಸಿಫರ್ ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ. ಮೋಹನ್ ಲಾಲ್, ವಿವೇಕ್ ಒಬೆರಾಯ್ ಮತ್ತು ಮಂಜು ವಾರಿಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೃಥ್ವಿರಾಜ್ ನಿರ್ದೇಶನದ ಸಾಹಸದ ಜೊತೆಗೆ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿರಂಜೀವಿ ಅವರ ಗಾಡ್‌ಫಾದರ್‌ನಲ್ಲಿ ಸಲ್ಮಾನ್ ಖಾನ್ ಪೃಥ್ವಿರಾಜ್ ಪಾತ್ರವನ್ನು ಪೋಷಿಸಲಿದ್ದಾರೆ.
ಗಾಡ್ ಫಾದರ್ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಮೋಹನ್ ರಾಜಾ ಆಕ್ಷನ್ ಕಟ್ ಹೆಳುತ್ತಿದ್ದಾರೆ. ಚಿತ್ರವನ್ನು ಕೊನಿಡೆಲಾ ಪ್ರೊಡಕ್ಷನ್ ಕಂಪನಿ, ಜಯಂ ಕಂಪನಿ ಮತ್ತು ಎನ್‌ವಿಆರ್ ಸಿನಿಮಾ ಎಲ್‌ಎಲ್‌ಪಿ ಜಂಟಿಯಾಗಿ ಬಂಡವಾಳ ಹೂಡುತ್ತಿವೆ. ಚಿರಂಜೀವಿ ಮತ್ತು ಸಲ್ಮಾನ್ ಖಾನ್ ಹೊರತುಪಡಿಸಿ, ನಯನತಾರಾ, ಸತ್ಯದೇವ್ ಕಾಂಚರಣ, ಹರೀಶ್ ಉತ್ತಮನ್, ಜಯಪ್ರಕಾಶ್ ಮತ್ತು ವಂಶಿ ಕೃಷ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್, ಅನುಷ್ಕಾ ಶೆಟ್ಟಿ ಮತ್ತು ಶ್ರುತಿ ಹಾಸನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಬಹುದು ಎಂಬ ವದಂತಿಗಳಿವೆ. ಚಿತ್ರಕ್ಕೆ ಎಸ್ ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ…
Megastar Chiranjeevi welcomes Salman Khan to the cast of Godfather, calls it an absolute joy








