ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಲಿರುವ ಮೇಘಾ ಶೆಟ್ಟಿ- ಸಡಗರ ರಾಘವೇಂದ್ರ ನಿರ್ದೇಶನದ ಹೊಸ ಚಿತ್ರ
ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ನಿರ್ಮಾಣದ ಸಡಗರ ರಾಘವೇಂದ್ರ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಚಿತ್ರ ಮೂಡಿ ಬರಲಿದೆ.
ಕವೀಶ್ ಶೆಟ್ಟಿ ಮತ್ತು ಜೊತೆ ಜೊತೆಯಲಿ ಖ್ಯಾತಿಯ ಬೆಡಗಿ ಮೇಘಾ ಶೆಟ್ಟಿ ಕಾಂಬಿನೇಷನ್ ನ ಈ ಚಿತ್ರ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಮೂಡಿ ಬರಲಿದೆ.
ಒಟ್ಟು ಆರು ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮರಾಠಿಯ ಡೇರ್ ಅಂಡ್ ಡ್ಯಾಶಿಂಗ್ ಗರ್ಲ್ ಶಿವಾನಿ ಸುರ್ವೆ ಮತ್ತು ರಫ್ ಅಂಡ್ ಟಫ್ ಬಾಯ್ ವಿರಾಟ್ ಮಟ್ಕೆ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಂದಿದೆ.
ಮರಾಠಿಯ ಹೆಸರಾಂತ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಾಯಕಿಯಾಗಿ ಹಾಗೂ ಮರಾಠಿ ಬಿಗ್ ಬಾಸ್ ಸೀಸನ್ ಎರಡರ ಫೈರಿಂಗ್ ಅಂಡ್ ಫೇರ್ ಬ್ರಾಂಡ್ ಶಿವಾನಿ ಹಾಗೂ ಮರಾಠಿಯ ಕೇಸರಿ ಚಿತ್ರದ ಮೂಲಕ ಮರಾಠಿ ಚಿತ್ರರಂಗದಲ್ಲಿ ಹವಾ ಸೃಷ್ಟಿಸಿದ ನಾಯಕ ವಿರಾಟ್ ಇಬ್ಬರೂ ಈ ಚಿತ್ರದಲ್ಲಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಕನ್ನಡ ಮತ್ತು ಹಿಂದಿಯ ಹೆಸರಾಂತ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಮೂಲಕ ನಿರ್ದೇಶಕ ಸಡಗರ ರಾಘವೇಂದ್ರ ಇದೇ ತಿಂಗಳ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸುಳಿವನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಟೈಟಲ್ ಸದ್ಯದಲ್ಲೇ ಅನಾವರಣಗೊಳಿಸುವುದಾಗಿ ಹೇಳಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ À ಅಗಲಿಕೆಯ ಹಿನ್ನೆಲೆಯಲ್ಲಿ ಅಬ್ಬರವಿಲ್ಲದೆÀ ಸಿಂಪಲ್ ಆಗಿ ಮುಹೂರ್ತಕ್ಕೆ ಮೊg ಹೋಗಿದೆ. ಇತ್ತೀಚೆಗೆ ಬಾಂಬೆಯಲ್ಲಿ ಔಪಚಾರಿಕವಾಗಿ ಸ್ಕ್ರಿಪ್ಟ್ ಪೂಜೆಯನ್ನು ನೆರವೇರಿಸಿದೆ. ಹಾಗೆಯೇ ಚಿತ್ರೀಕರಣಕ್ಕೂ ಮುನ್ನ ಕರ್ನಾಟಕದಲ್ಲಿ ಸರಳವಾಗಿ ಮುಹೂರ್ತ ಪೂಜೆಯನ್ನು ನೆರವೇರಿಸಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದೆ ಚಿತ್ರ ತಂಡ.