ಮೊದಲನೇ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಜೋಡಿ…!
ನಿರ್ದೇಶಕ ಸಡಗರ ರಾಘವೇಂದ್ರ ನಿರ್ದೇಶನದ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಹೊಸ ಕನ್ನಡ, ಮರಾಠಿ ಮತ್ತು ಇತರ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ತಂಡ ತನ್ನ ಮೊದಲನೆಯ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ ಸಂತಸದಲ್ಲಿದೆ.
ನಿರ್ಮಾಪಕ ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿಯವರ ನಿರ್ಮಾಣ ಸಂಸ್ಥೆ ಇಂಡಿಯನ್ ಫಿಲ್ಮ್ ಫ್ಯಾಕ್ಟರಿಯಿಂದ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರ ಈಗಾಗಲೇ ಕನ್ನಡ ಮರಾಠಿ ಹಾಗೂ ಇತರ ಬಹುಭಾಷಾ ತಾರೆಯರಿಂದ ಝಗಮಗಿಸುತ್ತಿದೆ.
ಇದೊಂದು ವಿಭಿನ್ನ ಕಥೆಯನ್ನು ಹೊಂದಿರುವ ಪ್ರೇಕ್ಷಕನ ಕುತೂಹಲ ಕೆರಳಿಸುವ ಪಕ್ಕಾ ಕಮರ್ಷಿಯಲ್ ಚಿತ್ರ. ನಿರ್ದೇಶಕನಾಗಿ ತನ್ನ ಮೊದಲನೆಯ ನಿರ್ದೇಶನದ ಚಿತ್ರವಾದರೂ ನಾಯಕ ಕವೀಶ್ ಶೆಟ್ಟಿ, ನಾಯಕಿ ಮೇಘಾ ಶೆಟ್ಟಿಯಿಂದ ಹಿಡಿದು ಮರಾಠಿಯ ಶಿವಾನಿ ಸುರ್ವೆ ಮತ್ತು ವಿರಾಟ್ ಮಡ್ಕೆ ಹಾಗೂ ಇನ್ನಿತರ ಕಲಾವಿದರು ಮತ್ತು ತಂತ್ರಜ್ಞರು, ವಿಶೇಷವಾಗಿ ನಿರ್ಮಾಪಕರು ಎಲ್ಲಾ ರೀತಿಯಿಂದಲೂ ಒಂದು ತಂಡವಾಗಿ ಸಹಕಾರ ನೀಡುತ್ತಿರುವುದು ನಿಜಕ್ಕೂ ಪ್ಲಸ್ ಪಾಯಿಂಟ್ ಎನ್ನುತ್ತಿರುವ ಸಡಗರ ರಾಘವೇಂದ್ರ ಇದೇ ತಿಂಗಳ ಅಂತ್ಯದಲ್ಲಿ ಎರಡನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ಸಾಧ್ಯವಾದರೆ ಅದಕ್ಕೂ ಮೊದಲೇ ಚಿತ್ರದ ಶೀರ್ಷಿಕೆ ಅನಾವರಣಗೊಳಿಸುವುದಾಗಿ ತಿಳಿಸಿದ್ದಾರೆ.