Megha Shetty : ಲಂಗಾ ದಾವಣಿಯಲ್ಲಿ ಮಿಂಚಿದ ಮೇಘಾ ಶೆಟ್ಟಿ..!!
ಜೊತೆ ಜೊತೆಯಲಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಮಿಂಚುತ್ತಲೇ ಚಂದನವನ್ನಕ್ಕೂ ಎಂಟ್ರಿ ಕೊಟ್ಟು , ಅಲ್ಲಿಯೂ ಸಕ್ರಿಯರಾಗಿದ್ದಾರೆ..
ಅಂದ್ಹಾಗೆ ಜೊತೆ ಜೊತೆಯಲಿ ಮುಗ್ಧ ಅನು ಪಾತ್ರದಲ್ಲಿ ಗಮನ ಸೆಳೆದಿರುವ ಮೇಘಾ ಈಗಾಗಲೇ ಗಣೇಶ್ ಜೊತೆಗೆ ನಟಿಸಿರುವ ತ್ರಿಬಲ್ ರೈಡಿಂಗ್ ಸಿನಿಮಾ ಕೂಡ ರಿಲೀಸ್ ಆಗಿದೆ.. ಆದ್ರೆ ಅಷ್ಟಾಗಿ ನಿರೀಕ್ಷೆ ಮುಟ್ಟಲಿಲ್ಲ. ಇದೀಗ ಲಂಗಾ ದಾವಣಿಯಲ್ಲಿ ಮೇಘಾ ಮಿರ ಮಿರ ಮಿಂಚುತ್ತಿದ್ದಾರೆ..
ಲಂಗದಾವಣಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಂತೆ ತಲೆತುಂಬಾ ಹೂ ಮುಡಿದು ಲಕ್ಷಣವಾಗಿ ಹಣೆಗೆ ಕುಂಕುಮ ಬೊಟ್ಟಿಟ್ಟು , ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ.
ಮುದ್ದಾಗಿ ನಗುತ್ತಾ ಇರುವ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು , ಮೇಘಾ ಲುಕ್ಸ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ..
Instagram ನಲ್ಲಿ ಮೇಘಾ ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್ ತರಹೇವಾರಿ ಕಾಮೆಂಟ್ ಗಳನ್ನ ಮಾಡ್ತಿದ್ದಾರೆ.. ಅಷ್ಟೇ ಅಲ್ಲ ಇನ್ನೂ ಒಬ್ಬ ನೆಟ್ಟಿನಂತೂ , ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಬದಲಾಗಿ ಮೇಘಾ ಅಕ್ಕರನ್ನು ಹಾಕಿಕೊಳ್ಳಿ ಕಮೆಂಟ್ ಮಾಡಿದ್ದು ಈ ಕಾಮೆಂಟ್ ಸಖತ್ ವೈರಲ್ ಆಗ್ತಿದೆ.
Megha Shetty : Megha Shetty shines in Langa Davani..!!