ಮಗುವಿನ ನಗುವಿನ ಸಂಭ್ರಮದಲ್ಲಿ ಸರ್ಜಾ ಕುಟುಂಬ – Meghana delivered baby boy
ಬೆಂಗಳೂರು, ಅಕ್ಟೋಬರ್22: ನವರಾತ್ರಿಯ ಈ ಶುಭದಿನ ಸರ್ಜಾ ಕುಟುಂಬಕ್ಕೆ ಸಂಭ್ರಮವನ್ನು ಹೊತ್ತು ತಂದಿದೆ. Meghana delivered baby boy
ಚಿರು ಅಗಲುವಿಕೆಯ ನಂತರ ಕಳೆದು ಹೋಗಿದ್ದ ನಗು ಜೂನಿಯರ್ ಚಿರು ರೂಪದಲ್ಲಿ ಮತ್ತೊಮ್ಮೆ ಮರಳಿ ಬಂದಿದೆ.
ಮೇಘನಾ ರಾಜ್ ಅವರು ಇಂದು ಬೆಳಗ್ಗೆ 11.07 ಕ್ಕೆ ಮುದ್ದಾದ ಗಂಡು ಮಗುವಿಗೆ, ಅಕ್ಷ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ.
ಸರ್ಜಾ ಕುಟುಂಬದಲ್ಲಿ ಕವಿದಿದ್ದ ನೋವಿನ ಬೇಸರದ
ಕಾರ್ಮೋಡ ಕರಗಲು ಚಿರು ಮೇಘನಾ ಅವರ ಮಡಿಲಿನಲ್ಲಿ ಮತ್ತೆ ಮಗುವಾಗಿ ಹುಟ್ಟಿ ಬಂದಿದ್ದು, ಮಗುವಿನ ನಗುವಿನ ಸಂಭ್ರಮ ಸರ್ಜಾ ಕುಟುಂಬದಲ್ಲಿ ಮನೆ ಮಾಡಿದೆ.
ಮೇಘನಾ ಹಾಗೂ ಅವರ ಮಗು ಇಬ್ಬರೂ ಆರೋಗ್ಯವಾಗಿದ್ದು, ಧೃವ ಸರ್ಜಾ ಮಗುವನ್ನು ಎತ್ತಿಕೊಂಡು ಮುದ್ದಾಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೂನಿಯರ್ ಚಿರುಗೆ ವೈದ್ಯರು ಆಸ್ಪತ್ರೆಯಲ್ಲಿದ್ದ ಚಿರು ಫೋಟೋ ಬಳಿ ಎತ್ತಿಕೊಂಡು ಚಿರುವಿನ ದರ್ಶನ ಮಾಡಿಸಿದ್ದಾರೆ.
ಆಸ್ಪತ್ರೆಯಲ್ಲಿದ್ದ ಎಲ್ಲರಿಗೂ ಧ್ರುವ ಸರ್ಜಾ ಅವರು ಸಿಹಿ ಹಂಚಿ ಅಣ್ಣನ ಮಗುವಿನ ಆಗಮನವನ್ನು ಸಂಭ್ರಮಿಸಿದ್ದಾರೆ.
ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಚಿರುವಿನ ಆಗಮನ
ಚಿರು ಹುಟ್ಟುಹಬ್ಬದಂದು ಹಿರಿಯ ನಟ ಅರ್ಜುನ್ ಸರ್ಜಾ ಅವರು ಜೂನಿಯರ್ ಚಿರುವನ್ನು ಸ್ವಾಗತಿಸಲು ಕುಟುಂಬವು ಸಿದ್ಧವಾಗುತ್ತಿದೆ ಎಂದು ಹೇಳಿದ್ದರು.
ಇದು ಕೂಡ ಹಾದುಹೋಗುತ್ತದೆ, ನಾವು ಜೀವನದಲ್ಲಿ ಮುಂದುವರಿಯಬೇಕು ಎಂಬ ಮಾತನ್ನು ನಾನು ನಂಬುತ್ತೇನೆ. ವಿಷಯಗಳನ್ನು ಮರೆತುಬಿಡುವ ಬದಲು, ನಾವು ಬಲಶಾಲಿಯಾಗಲು ಪ್ರಯತ್ನಿಸಿದ್ದೇವೆ. ನಾವು ನಿನಗಾಗಿ ಮತ್ತು ಮಗುವಿಗಾಗಿ ಇರುತ್ತೇವೆ ಎಂದು ಅರ್ಜುನ್ ಸರ್ಜಾ ಮೇಘನಾಗೆ ಹೇಳಲು ಬಯಸುತ್ತೇನೆ ಎಂದಿದ್ದರು.ನಮ್ಮ ಜೂನಿಯರ್ ಚಿರುವನ್ನು ನಗು ಮತ್ತು ಸಂತೋಷದಿಂದ ಸ್ವಾಗತಿಸುವ ಮೂಲಕ ಎಲ್ಲಾ ನಿರಾಕರಣೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸುವುದಕ್ಕಾಗಿ ಈ ಸಣ್ಣ ಒಗ್ಗೂಡಿಸುವಿಕೆ ಎಂದು ಅರ್ಜುನ್ ಮೇಘನಾ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದರು.
ನವರಾತ್ರಿಯ ಈ ಶುಭದಿನದಂದು ಜನಿಸಿರುವ ಮುದ್ದು ಮಗುವಿಗೆ ಆ ನವ ದುರ್ಗೆಯರ ಕೃಪಾ ಕಟಾಕ್ಷವಿರಲಿ. ಮಗುವಿನ ನಗು ಸರ್ಜಾ ಕುಟುಂಬದಲ್ಲಿನ ಎಲ್ಲಾ ನೋವು, ವೇದನೆಗಳನ್ನು ಮರೆಸಿ ಸಂತೋಷ ಹಾಗೂ ಸಂಭ್ರಮಕ್ಕೆ ಕಾರಣವಾಗಲಿ ಎಂಬುವುದು ನಮ್ಮ ಹಾರೈಕೆ .
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ