ಆರ್ಟಿಕಲ್ 370 ಮರು ಸ್ಥಾಪನೆ ಆಗೋವರೆಗೂ ನಾನು ಚುನಾವಣೆಗಳಲ್ಲಿ ಸ್ಪರ್ಧಿಸಲ್ಲ : ಮೆಹಬೂಬಾ ಮುಫ್ತಿ
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾರ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಕಾಶಶ್ಮೀರದ ಹಲವು ಜನಪ್ರತಿನಿಧಿಗಳನ್ನ ಸುಮಾರು ತಿಂಗಳುಗಳ ವರೆಗೂ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಇದೀಗ ಗೃಹ ಬಂಧದನದಿಂದ ಒಬ್ಬೊಬ್ಬರೇ ಮುಕ್ತರಾಗಿದ್ದಾರೆ. ಈ ಪೈಕಿ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸಹ ಒಬ್ಬರು. ಇತ್ತೀಚೆಗೆ ಮತ್ತೆ ಚುನಾವಣೆಗಳ ಕುರಿತಾಗಿ ಪ್ರತಿಕ್ರಿಯೆ ನೀಡುತ್ತಾ ಮುಫ್ತಿ ಮತ್ತೆ ಸುದ್ದಿಯಲ್ಲಿದ್ದಾರೆ.
ಓವರ್ ಟೇಕ್ ತಂದ ಆಪತ್ತು, ಅಂಗಡಿಗೆ ನುಗ್ಗಿದ ಕಾರು
ಈ ಬಾರಿ ಮತ್ತೆ ಚುನಾವಣೆ ಕುರಿತಾಗಿ ಮಾತನಾಡಿರುವ ಅವರು, ಮತ್ತೆ ವಿಶೇಷ ಸ್ಥಾನಮಾನ ನೀಡುವವರೆಗೂ ನಾನು ವಿಧಾನಸಭಾ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ತಾನಮಾನವನ್ನ ಮರು ಸ್ಥಾಪಿಸುವ ಹೋರಾಟ ಮುಂದುವರೆಸುವುದಾಗಿ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








