Acharya | ಆಚಾರ್ಯ ಸಿನಿಮಾದಲ್ಲಿ ಹಿಂದೆಂದೂ ನೋಡಿರದ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ-ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕ್ರೇಜಿ ಸಿನಿಮಾ ‘ಆಚಾರ್ಯ’.
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಏಪ್ರಿಲ್ 29 ರಂದು ಚಿತ್ರ ಬಿಡುಗಡೆಯಾಗಲಿದೆ.
ಈಗಾಗಲೇ ಈ ಚಿತ್ರದ ಟೀಸರ್, ಟ್ರೇಲರ್, ಪೋಸ್ಟರ್ ಮತ್ತು ಹಾಡುಗಳು ಎಲ್ಲರನ್ನು ಆಕರ್ಷಿಸುತ್ತಿವೆ.
ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ‘ಆಚಾರ್ಯ’ ಚಿತ್ರತಂಡ ಪ್ರಚಾರ ಕಾರ್ಯದಲ್ಲೂ ತೊಡಗಿದೆ.
ಈ ನಡುವೆ ಪ್ರೀ ರಿಲೀಸ್ ಸಮಾರಂಭ ನಡೆದಿದ್ದು, ಇದರಲ್ಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ, ಬಾಬಿ, ಮೋಹನ್ ರಾಜಾ ಮತ್ತು ಮೆಹರ್ ರಮೇಶ್ ಅತಿಥಿಗಳಾಗಿ ಆಗಮಿಸಿದ್ದರು.
ಇವರೊಂದಿಗೆ ಫೈಟ್ ಮಾಸ್ಟರ್ ರಾಮ್-ಲಕ್ಷ್ಮಣ್ ಮತ್ತು ಬುಟ್ಟಬೊಮ್ಮ ಪೂಜಾ ಹೆಗ್ಡೆ ಭಾಗವಹಿಸಿದ್ದರು.
ಚಿರಂಜೀವಿ ಅವರ ಮುಂದಿನ ಚಿತ್ರ ಭೋಲಾ ಶಂಕರ್ ನಿರ್ದೇಶಕ ಮೆಹರ್ ರಮೇಶ್ ಅವರು ಮಾತನಾಡಿ, ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರವೆಂದರೆ ಹಬ್ಬ.
ಕೊರಟಾಲ ಶಿವ ಚಿರಂಜೀವಿ ಮತ್ತು ರಾಮ್ ಚರಣ್ ಇಬ್ಬರನ್ನೂ ತೋರಿಸುತ್ತಿದ್ದಾರೆ. ಇದು ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡಲಿದೆ.
ಆಚಾರ್ಯ ಸಿನಿಮಾದಲ್ಲಿ ಇಂಟರ್ವಲ್ ಆಕ್ಷನ್ ಎಪಿಸೋಡ್ ನೋಡಿದ್ದೇನೆ. ಹಿಂದೆಂದೂ ನೋಡದ ಮೆಗಾಸ್ಟಾರ್ ಅನ್ನು ನೀವು ನೋಡುತ್ತೀರ ಎಂದಿದ್ದಾರೆ.
meher-ramesh-about-chiranjeevi-acharya