ಬೆಂಗಳೂರು : ಮೇಕೆದಾಟು ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಇದರ ವಾಸ್ತವಾಂಶ ನಮಗೆಲ್ಲರಿಗೂ ಗೊತ್ತಿದೆ. ಅದರ ಪರಿಣಾಮಗಳ ಬಗ್ಗೆ ಲೀಗಲ್ ಟೀಂ ಜತೆ ಚರ್ಚೆ ನಡೆಸ್ತೇನೆ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಸಮತೋಲಿತ ಜಲಾಶಯ ಮಾಡಬೇಕು ಅನ್ನೋದು ನಮ್ಮ ಬೇಡಿಕೆ ಇದೆ. ಮೇಕೆದಾಟಿನಿಂದ ಮುಳುಗಡೆ ಜಾಸ್ತಿ ಆಗುತ್ತೆ ಅಂತ ಚಿಕ್ಕ ಡ್ಯಾಂ ಕಟ್ಟಲು 2012 ರಲ್ಲಿ ಚರ್ಚೆ ಆಯ್ತು.
2019-20 ರಲ್ಲಿ ಮೇಕೆದಾಟು ಡಿಪಿಆರ್ ಆಯ್ತು. ಈ ಡಿಪಿಆರ್ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಎದುರು ಇದೆ. ಕೇಂದ್ರದ ಪರಿಸರ ಇಲಾಖೆಯ ಅನುಮತಿ ಯೋಜನೆಗೆ ಬೇಕಾಗಿದೆ. ಇದೆಲ್ಲದರ ಮಧ್ಯೆ ಸುಪ್ರೀಂ ಕೋರ್ಟ್ ತಮಿಳುನಾಡು ಅರ್ಜಿ ಹಾಕಿದೆ. ಆದಷ್ಟು ಬೇಗ ಮೇಕೆದಾಟು ಯೋಜನೆ ಆರಂಭ ಆಗ್ಬೇಕು. ಇದರ ಬಗ್ಗೆ ನಾವೆಲ್ಲರೂ ಕೂತು ಒಟ್ಟಿಗೆ ತೀರ್ಮಾನ ತಗೋಬೇಕು. ಮುಂದಿನ ವಾರದ ಸಭೆಗೆ ಕಾನೂನು ತಂಡವೂ ಬರಲಿದೆ. ಎಲ್ಲರ ಸಲಹೆ ಪಡೆದು ಮುಂದುವರೆಯುತ್ತೇವೆ ಎಂದು ತಿಳಿಸಿದ್ದಾರೆ.