ಕನ್ನಡಿಗರನ್ನ ಅಟ್ಟಾಡಿಸಿ ಹೊಡಿತೀವಿ : ನಾಲಿಗೆ ಹರಿಬಿಟ್ಟ ಎಂಇಎಸ್ ಪುಂಡ
ಬೆಳಗಾವಿ : ಜಿಲ್ಲೆಯಲ್ಲಿ ನಾಡದ್ರೋಹಿ ಎಂಇಎಸ್ ಮುಖಂಡರ ಉದ್ಧಟತನ ಎಲ್ಲೆ ಮೀರಿದೆ.
ಎಂಇಎಸ್ ಮುಖಂಡ ಶುಭಂ ಸಾಳುಂಕೆ ಎಂಬುವ ಕನ್ನಡರಿಗರನ್ನ ಅಟ್ಟಾಡಿಸಿಕೊಂಡು ಹೊಡಿತೀವಿ ಅಂತಾ ನಮ್ಮ ನೆಲದಲ್ಲಿ ನಿಂತು ನಾಲಿಗೆ ಹರಿಬಿಟ್ಟಿದ್ದಾನೆ.
ಬೆಳಗಾವಿಯಲ್ಲಿ ಶಿವಸೇನೆ ಎಂಇಎಸ್ ಒಂದೇ ನಾಣ್ಯದ ಎರಡು ಮುಖಗಳು. ಹಳದಿ ಕೆಂಪು ಬಣ್ಣದ ಶಾಲು ಧರಿಸಿದವರನ್ನ ಸಿಕ್ಕ ಸಿಕ್ಕಲ್ಲಿ ಹೊಡ್ತಿವಿ.
ನಮ್ಮ ಶಾಂತಿಯುತ ಹೋರಾಟವನ್ನ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು.
ಇಲ್ಲವಾದಲ್ಲಿ ನಾವು ಬೇರೆ ಪದ್ಧತಿಯಿಂದ ಉತ್ತರ ಕೊಡಬೇಕಾಗುತ್ತದೆ ಎಂದು ನಾಡದ್ರೋಹಿ ಸಾಳುಂಕೆ ವಿಡಿಯೋ ಹರಿಬಿಟ್ಟಿದ್ದಾನೆ.
ಎರಡು ದಿನಗಳ ಹಿಂದೆ ಶಿವಸೇನೆ ಮುಖಂಡ ಪ್ರಕಾಶ ಶಿರೋಳಕ ವಾಹನದ ನಾಮಫಲಕಕ್ಕೆ ಕನ್ನಡ ಹೋರಾಟಗಾರರು ಮಸಿ ಬಳಿದಿದ್ದರು.
ಈ ಕುರಿತು ವಿಡಿಯೋ ಮಾಡಿರುವ ಸಾಳುಂಕೆ ಕನ್ನಡಿಗರಿಗೆ ಎಚ್ಚರಿಕೆ ನೀಡಿದ್ದಾನೆ.









