Messi’s Argentina | ಮೆಸ್ಸಿ ಪಡೆಗೆ ಫೈನಲಿಸಿಮಾ ಕಿರೀಟ
ಫೈನಲಿಸಿಮಾ ಕಪ್ ಗೆದ್ದುಕೊಂಡ ಅರ್ಜೆಂಟಿನಾ
ಸ್ಟಾರ್ ಪ್ಲೇಯರ್ ಲಿಯೊನೆಲ್ ಮೆಸ್ಸಿ ವಿಶೇಷ ಸಾಧನೆ
ಮೆಸ್ಸಿಗೆ ಇದು ಎರಡನೇ ಅಂತರಾಷ್ಟ್ರೀಯ ಟ್ರೋಫಿ
ಲಂಡನ್ ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯ
ಲಂಡನ್ ನ ವೆಂಬ್ಲಿ ಸ್ಟೇಡಿಯಂ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಫೈನಲಿಸಿಮಾ ಕಪ್ ಗೆದ್ದುಕೊಂಡಿದೆ.
ಇಟಲಿ ತಂಡವನ್ನು ಮೂರು ಸೊನ್ನೆ ಅಂತರದಲ್ಲಿ ಲಿಯೋನಲ್ ಮೆಸ್ಸಿ ನಾಯಕತ್ವ ಅರ್ಜೆಂಟಿನಾ ತಂಡ ಸೋಲಿಸಿದೆ.
ಇದು ಏಳು ಬಾರಿಯ ಬ್ಯಾಲನ್ ಡಿ ಓಆರ್ ಪ್ರಶಸ್ತಿ ವಿಜೇತ ಮೆಸ್ಸಿಗೆ ಎರಡನೇ ಅಂತರರಾಷ್ಟ್ರೀಯ ಟ್ರೋಫಿಯಾಗಿದೆ.

ಫೈನಲಿಸಿಮಾ ಕಪ್ ಗೂ ಮೊದಲು ಅರ್ಜೆಂಟೀನಾ ರಾಷ್ಟ್ರೀಯ ತಂಡವು ಮೆಸ್ಸಿ ಸಾರಥ್ಯದಲ್ಲಿ ಪ್ರತಿಷ್ಠಿತ ಕೋಪಾ ಅಮೆರಿಕಾ ಟೂರ್ನಿಯ ಚಾಂಪಿಯನ್ ಆಗಿ ಮೆರೆದಿತ್ತು.
ಇನ್ನು ಕಪ್ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಅರ್ಜೆಂಟಿನಾ ಅಭಿಮಾನಿಗಳು ಕುಣಿದುಕುಪ್ಪಳಿಸಿದರು. ಆಟಗಾರರು ಕೂಡ ಸಂಭ್ರಮ ಆಚರಣೆ ಮಾಡಿದರು.








