ರಾಮನಗರದವರೆಗೂ ಮೆಟ್ರೋ ವಿಸ್ತರಣೆ : ಬೊಮ್ಮಾಯಿ
ಬೆಂಗಳೂರು : ಮುಂದಿನ ದಿನಗಳಲ್ಲಿ ರಾಮನಗರದವರೆಗೂ ಮೆಟ್ರೋ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಇಂದು ಬೆಂಗಳೂರಿನ ನಾಯಂಡಹಳ್ಳಿ – ಕೆಂಗೇರಿ ನಡುವಿನ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಭವಿಷ್ಯದಲ್ಲಿ ರಾಮನಗರ, ರಾಜಾನುಕುಂಟೆ, ಮಾಗಡಿವರೆಗೂ ಮೆಟ್ರೋ ವಿಸ್ತರಿಸುವ ಗುರಿಯಿದೆ.
ಜನಸಂದಣಿ ಪ್ರದೇಶದಲ್ಲಿ ಮೆಟ್ರೋ ಅಗತ್ಯವಿದೆ. ದೇಶ – ವಿದೇಶದಿಂದ ಬರುವವರಿಗೆ ಉತ್ತಮ ಸಾರಿಗೆ ಬೇಕು. ಅದನ್ನು ನಮ್ಮ ಮೆಟ್ರೋ ಪೂರೈಸುತ್ತದೆ ಎಂದು ಹೇಳಿದರು.
ಹೊಸಕೋಟೆವರೆಗೂ ಮೆಟ್ರೋ
ಇನ್ನು ಬೆಂಗಳೂರಿನಿಂದ ಕೊಂಚ ದೂರ ಇರುವ ಹೊಸಕೋಟೆಗೆ ಮೆಟ್ರೋ ಸಂಚಾರ ಕಲ್ಪಿಸುವಂತೆ ಸಚಿವ ಎಂಟಿಬಿ ನಾಗರಾಜ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.









