ADVERTISEMENT
Wednesday, April 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಯಾರು ಈ ಬಿಪಿನ್ ರಾವತ್….ಸೇನಾ ಮುಖ್ಯಸ್ಥರ ಹೆಜ್ಜೆ ಗುರುತುಗಳು…

Mahesh M Dhandu by Mahesh M Dhandu
December 8, 2021
in National, Newsbeat, Saaksha Special, ಎಸ್ ಸ್ಪೆಷಲ್, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಯಾರು ಈ ಬಿಪಿನ್ ರಾವತ್….ಸೇನಾ ಮುಖ್ಯಸ್ಥರ ಹೆಜ್ಜೆ ಗುರುತುಗಳು…

ಬುಧವಾರ ಮಧ್ಯಾಹ್ನ ಹೆಲಿಕಾಪ್ಟರ್ ಅಪಘಾತದ ಸುದ್ದಿ ಕೇಳಿ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಕೆಲವು ಗಂಟೆಗಳ ನಂತರ ದಟ್ಟ ಮಂಜು, ಹೊಗೆ  ತೆರವುಗೊಂಡಿತು. ಸತ್ಯ ಹೊರಬಂದ ನಂತರ ದೇಶದ ಜನರ ಕಣ್ಣಾಲಿಗಳು ತೇವವಾದವು. ಭಾರತೀಯ ಸೇನೆಗೆ ಸೇರಿದ  ಎಂಐ-17 ಹೆಲಿಕಾಪ್ಟರ್ ತಮಿಳುನಾಡಿನ ಕಣ್ಣೂರಿನ ಅರಣ್ಯದಲ್ಲಿ ಪತನಗೊಂಡಿತು. ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.

Related posts

ಉಪಚುನಾವಣೆ ಕಣದಲ್ಲಿ ಅಚ್ಚರಿಯ ಬೆಳವಣಿಗೆ ಯತ್ನಾಳ್ ಪ್ರಚಾರಕ್ಕೆ ಬಂದರೆ ಮುಕ್ತ ಸ್ವಾಗತ ಎಂದ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಉಪಚುನಾವಣೆ ಕಣದಲ್ಲಿ ಅಚ್ಚರಿಯ ಬೆಳವಣಿಗೆ ಯತ್ನಾಳ್ ಪ್ರಚಾರಕ್ಕೆ ಬಂದರೆ ಮುಕ್ತ ಸ್ವಾಗತ ಎಂದ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

April 1, 2026
ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ

ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ

April 1, 2026

ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್. ಜನರಲ್ ಬಿಪಿನ್ ರಾವತ್ ಎಂದು ನಮಗೆಲ್ಲ ಪರಿಚಯ.. ಜನರಲ್ ರಾವತ್ ಅವರು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಚೌಹಾನ್ ರಜಪೂತ್ ಕುಟುಂಬದಲ್ಲಿ 16 ಮಾರ್ಚ್ 1958 ರಂದು ಜನಿಸಿದರು. ಜನರಲ್ ರಾವತ್ ಅವರ ತಾಯಿ ಪರ್ಮಾರ್ ರಾಜವಂಶದವರು.

ಬಿಪಿನ್ ರಾವತ್ ಪೂರ್ವಜರು ಮಾಯಾಪುರ/ಹರಿದ್ದಾರ್‌ನಿಂದ ಬಂದು ಗರ್ವಾಲ್‌ನ ಪರ್ಸಾಯಿ ಗ್ರಾಮದಲ್ಲಿ ನೆಲೆಸಿದ್ದರು. ಅವರನ್ನು ಪರಸರ ರಾವತ್ ಎಂದು ಕರೆಯಲಾಗುತ್ತಿತ್ತು. ರಾವತ್ ಎಂದರೆ ಗರ್ವಾಲ್‌ನ ಆಡಳಿತಗಾರರು ರಜಪೂತರಿಗೆ ನೀಡಿದ ಮಿಲಿಟರಿ ಬಿರುದು. ಅವರ ತಂದೆ ಲೆಫ್ಟಿನೆಂಟ್ ಜನರಲ್ ಲಕ್ಷ್ಮಣ್ ಸಿಂಗ್ ರಾವತ್ ಅವರು ಸೈನ್ಯದಿಂದ ಲೆಫ್ಟಿನೆಂಟ್ ಜನರಲ್ ಆಗಿ ನಿವೃತ್ತರಾದರು. ರಾವತ್ 1978 ರಲ್ಲಿ ಹನ್ನೊಂದನೇ ಗೂರ್ಖಾ ರೈಫಲ್ಸ್‌ನ 5 ನೇ ಬೆಟಾಲಿಯನ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

 

ಶಿಕ್ಷಣ ಮತ್ತು ವೃತ್ತಿ

ರಾವತ್ ಡೆಹ್ರಾಡೂನ್‌ನ ಕ್ಯಾಂಬ್ರಿಯನ್ ಹಾಲ್ ಶಾಲೆ, ಶಿಮ್ಲಾದ ಸೇಂಟ್ ಎಡ್ವರ್ಡ್ ಶಾಲೆ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದರು. ಇಲ್ಲಿ ಅವರಿಗೆ ‘ಸ್ವರ್ಡ್ ಆಫ್ ಆನರ್’ ನೀಡಲಾಯಿತು. ಅವರು ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್‌ನ ಪದವೀಧರರಾಗಿದ್ದರು ಜೊತೆಗೆ ಯುಎಸ್‌ಎಯ ಫೋರ್ಟ್ ಲೀವೆನ್‌ವರ್ತ್‌ನಲ್ಲಿರುವ ಹೈಯರ್ ಕಮಾಂಡ್ ಕೋರ್ಸ್‌ನಲ್ಲಿ ಪದವೀಧರರಾಗಿದ್ದರು. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ರಕ್ಷಣಾ ಅಧ್ಯಯನದಲ್ಲಿ ಎಂಫಿಲ್, ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮತ್ತು ಕಂಪ್ಯೂಟರ್ ಅಧ್ಯಯನದಲ್ಲಿ ಡಿಪ್ಲೊಮಾ ಮಾಡಿದ್ದಾರೆ. 2011 ರಲ್ಲಿ, ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯ, ಮೀರತ್‌ನಿಂದ ಅವರು ಮಿಲಿಟರಿ-ಮಾಧ್ಯಮ ಕಾರ್ಯತಂತ್ರದ ಅಧ್ಯಯನಗಳ ಸಂಶೋಧನೆಗಾಗಿ ಡಾಕ್ಟರೇಟ್ ಆಫ್ ಫಿಲಾಸಫಿಯನ್ನು ಪಡೆದರು.

 

ಎರಡು ವರ್ಷಗಳ ಹಿಂದೆ ಸಿಡಿಎಸ್ ಆಯಿತು

ಮಾಜಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (61) ಅವರು 2019 ರಲ್ಲಿ ದೇಶದ ಮೊದಲ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಆಗಿ ನೇಮಕಗೊಂಡರು. ಅವರು 65 ವರ್ಷದವರೆಗೆ ಈ ಹುದ್ದೆಯಲ್ಲಿ ಇರಬೇಕಿತ್ತು. ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಸರಿಯಾದ ಮತ್ತು ಪರಿಣಾಮಕಾರಿ ಸಮನ್ವಯವನ್ನ ಕೈಗೊಳ್ಳಲು ಈ ಹುದ್ದೆಯನ್ನು ರಚಿಸಲಾಗಿತ್ತು.

ರಾವತ್ ಡಿಸೆಂಬರ್ 1978 ರಲ್ಲಿ 11 ಗೂರ್ಖಾ ರೈಫಲ್ಸ್ ನಲ್ಲಿ ಅಧಿಕಾರಿಯಾಗಿ ನಿಯೋಜಿತರಾದರು. ಅವರು 31 ಡಿಸೆಂಬರ್ 2016 ರಂದು ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಪೂರ್ವ ವಲಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆ, ಕಾಶ್ಮೀರ ಕಣಿವೆ ಮತ್ತು ಈಶಾನ್ಯ ರಾಜ್ಯಗಳ ಗಡಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ವಿಶೇಷವೆಂದರೆ ರಾವತ್ ಅವರ ತಂದೆ ಕಾರ್ಯ ನಿರ್ವಹಿಸುತ್ತಿದ್ದ ಅದೇ ಘಟಕದಲ್ಲಿ (11 ಗೂರ್ಖಾ ರೈಫಲ್ಸ್) ಇವರನ್ನೂ ನಿಯೋಜಿಸಲಾಗಿತ್ತು.

 

ರಾವತ್ ಅವರು ಅಲಂಕರಿಸಿದ್ದ  ಹುದ್ದೆಗಳು…

ಬ್ರಿಗೇಡ್ ಕಮಾಂಡರ್

ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (GOC-C) ದಕ್ಷಿಣ ಕಮಾಂಡ್

ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 2, ಮಿಲಿಟರಿ ಕಾರ್ಯಾಚರಣೆಗಳ ನಿರ್ದೇಶನಾಲಯ

ಕರ್ನಲ್ ಮಿಲಿಟರಿ ಕಾರ್ಯದರ್ಶಿ ಮತ್ತು ಉಪ ಮಿಲಿಟರಿ ಕಾರ್ಯದರ್ಶಿ

ಜೂನಿಯರ್ ಕಮಾಂಡ್ ವಿಂಗ್‌ನಲ್ಲಿ ಹಿರಿಯ ಬೋಧಕ

ಕಮಾಂಡರ್ ಯುನೈಟೆಡ್ ನೇಷನ್ಸ್ ಪೀಸ್ ಕೀಪಿಂಗ್ ಫೋರ್ಸ್ ಬಹುರಾಷ್ಟ್ರೀಯ ಬ್ರಿಗೇಡ್

ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ

ಸೇನಾ ಮುಖ್ಯಸ್ಥ

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ

 

ರಾವತ್ ಅವರಿಗೆ ಒಲಿದು ಬಂದಿರುವ ಸೇನಾ ಗೌರವಗಳು…

ಪರಮ ವಿಶಿಷ್ಟ ಸೇವಾ ಪದಕ

ಉತ್ತಮ ಯುದ್ಧ ಸೇವಾ ಪದಕ

ಅತಿ ವಿಶಿಷ್ಟ ಸೇವಾ ಪದಕ

ಯುದ್ಧ ಸೇವಾ ಪದಕ

ಸೇನಾ ಪದಕ

ಜನರಲ್ ರಾವತ್ ಅವರು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಕೆಲಸ ಮಾಡುವ ಸಮರ್ಥ ಅಧಿಕಾರಿ ಎಂದು ಸರ್ಕಾರಕ್ಕೆ ತಿಳಿದಿತ್ತು. ಇದೇ ಕಾರಣಕ್ಕೆ 2016ರಲ್ಲಿ ಅವರಿಗೆ ಇಬ್ಬರು ಹಿರಿಯ ಅಧಿಕಾರಿಗಳಿಗಿಂತ ಆದ್ಯತೆ ನೀಡಿ ಸೇನಾ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು.

ಜೂನ್ 2015 ರಲ್ಲಿ ಮಣಿಪುರದಲ್ಲಿ ನಮ್ಮ ಸೇನೆಯ ಮೇಲೆ ಉಗ್ರರ ದಾಳಿ ನಡೆಸಿದಾಗ  18 ಸೈನಿಕರು ಹುತಾತ್ಮರಾಗಿದ್ದರು. ಆ ಅವಧಿಯಲ್ಲಿ ಬಿಪಿನ್ ರಾವತ್ ಅವರು 21 ಪ್ಯಾರಾ ಥರ್ಡ್ ಕಾರ್ಪ್ಸ್‌ನ ಕಮಾಂಡರ್ ಆಗಿದ್ದರು. ಭಾರತವನ್ನ ಕೆಣಕಿದರೆ ಏನಾಗುತ್ತದೆ ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದರು. ಪ್ಯಾರಾ ಕಮಾಂಡೋಗಳು ಭಾರತದ ಗಡಿ ದಾಟಿ ಮ್ಯಾನ್ಮಾರ್‌ ಳಗೆ ನುಗ್ಗಿ ಕಾರ್ಯಾಚರಣೆ ನಡಸಿದ್ದರು. ಎನ್‌ಎಸ್‌ಸಿಎನ್ ಗುಂಪಿನ 60 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಅವರ ಗುಹೆ ಹೊಕ್ಕಿ ಹೊಡೆದುರುಳಿಸಿದ್ದರು.

ಪಾಕಿಸ್ತಾನದ ಉಪಟಳಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. 29 ಸೆಪ್ಟೆಂಬರ್ 2016 ರಂದು, ಭಾರತೀಯ ಸೇನೆಯು ಪಾಕ್ ಮೇಲೆ ಸರ್ಜಿಕಲ್ ದಾಳಿ ಕೈಗೊಂಡಿತ್ತು. ಇದರಲ್ಲಿ ಅನೇಕ ಭಯೋತ್ಪಾದಕರ ಜೊತೆಗೆ ಪಾಕಿಸ್ತಾನಿ ಸೈನಿಕರೂ ಹತರಾಗಿದ್ದಾರೆ. ಇದು ನಮ್ಮ ಉರಿ ಮತ್ತು ಸಿಆರ್‌ಪಿಎಫ್ ಶಿಬಿರಗಳ ಮೇಲಿನ ದಾಳಿಗೆ ಪ್ರತಿಕಾರವಾಗಿತ್ತು.

Tags: #BipinRawatBipin RawatChief Defense Staff (CDS) General Bipin RawatchoperhelicoptorINDIAN ARMY
ShareTweetSendShare
Join us on:

Related Posts

ಉಪಚುನಾವಣೆ ಕಣದಲ್ಲಿ ಅಚ್ಚರಿಯ ಬೆಳವಣಿಗೆ ಯತ್ನಾಳ್ ಪ್ರಚಾರಕ್ಕೆ ಬಂದರೆ ಮುಕ್ತ ಸ್ವಾಗತ ಎಂದ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಉಪಚುನಾವಣೆ ಕಣದಲ್ಲಿ ಅಚ್ಚರಿಯ ಬೆಳವಣಿಗೆ ಯತ್ನಾಳ್ ಪ್ರಚಾರಕ್ಕೆ ಬಂದರೆ ಮುಕ್ತ ಸ್ವಾಗತ ಎಂದ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

by Shwetha
April 1, 2026
0

ರಾಜ್ಯ ರಾಜಕಾರಣದಲ್ಲಿ ಹಾಗೂ ವಿಶೇಷವಾಗಿ ಭಾರತೀಯ ಜನತಾ ಪಾರ್ಟಿಯ ಆಂತರಿಕ ವಲಯದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಹೊಸ...

ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ

ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ

by Shwetha
April 1, 2026
0

ರಾಜ್ಯದಲ್ಲಿ ನಡೆಯಲಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ....

ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾರಾಮಯ್ಯ ಸಾಲದರಾಮಯ್ಯ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆರ್ ಅಶೋಕ್ ತೀವ್ರ ವಾಗ್ದಾಳಿ

ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾರಾಮಯ್ಯ ಸಾಲದರಾಮಯ್ಯ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆರ್ ಅಶೋಕ್ ತೀವ್ರ ವಾಗ್ದಾಳಿ

by Shwetha
April 1, 2026
0

ದಾವಣಗೆರೆ: ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ...

SSLC ತೃತೀಯ ಭಾಷೆ ಹಿಂದಿಗೆ ಅಂಕ ಬದಲು ಗ್ರೇಡ್: ಹೊರಟ್ಟಿ ಖಂಡನೆ

SSLC ತೃತೀಯ ಭಾಷೆ ಹಿಂದಿಗೆ ಅಂಕ ಬದಲು ಗ್ರೇಡ್: ಹೊರಟ್ಟಿ ಖಂಡನೆ

by Shwetha
April 1, 2026
0

SSLC ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲು ಗ್ರೇಡ್ ನೀಡುವ ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ...

ತುತ್ತು ಎನ್ನುವ ಬದಲು ಕಚ್ಚುವಿಕೆ ಎಂದ ಬ್ಯಾಟರ್ ಬಾಕ್ಸ್ ಗೂಗಲ್ ಅನುವಾದ ನಂಬಿ ಕನ್ನಡ ಕುಲಗೆಡಿಸಿದ ಕಂಪನಿಗೆ ಕನ್ನಡಿಗರ ಛೀಮಾರಿ

ತುತ್ತು ಎನ್ನುವ ಬದಲು ಕಚ್ಚುವಿಕೆ ಎಂದ ಬ್ಯಾಟರ್ ಬಾಕ್ಸ್ ಗೂಗಲ್ ಅನುವಾದ ನಂಬಿ ಕನ್ನಡ ಕುಲಗೆಡಿಸಿದ ಕಂಪನಿಗೆ ಕನ್ನಡಿಗರ ಛೀಮಾರಿ

by Shwetha
April 1, 2026
0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾಷಾ ವಿವಾದಗಳು ಹೊಸದೇನಲ್ಲ. ಆದರೆ ಈ ಬಾರಿ ವಿವಾದಕ್ಕೆ ಕಾರಣವಾಗಿರುವುದು ನಾಮಫಲಕದ ಅಳತೆಯಲ್ಲ, ಬದಲಾಗಿ ಕನ್ನಡ ಭಾಷೆಯ ಕಗ್ಗೊಲೆ. ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯಾಪಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram