MI vs CSK Match | ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನುಳಿದ ಪಂದ್ಯಗಳಲ್ಲಿ ಗೆದ್ದರೇ ಕ್ಯಾಲ್ಕುಲೇಟರ್ ಲೆಕ್ಕಾಚಾರದಲ್ಲಿ ಪ್ಲೇ ಆಫ್ಸ್ ಪ್ರವೇಶಿಸುವ ಒಂದೇ ಒಂದು ಚಾನ್ಸ್ ಇದೆ.
ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮುಂದೆ ಇರುವ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಲು ಪ್ಲಾನ್ ಕಸರತ್ತು ನಡೆಸುತ್ತಿದೆ.
ಆದ್ರೆ ಗಾಯದ ಸಮಸ್ಯೆಯಿಂದಾಗಿ ರವೀಂದ್ರ ಜಡೇಜಾ ಟೂರ್ನಿಯಿಂದ ದೂರ ಸರಿದಿದ್ದು, ತಂಡಕ್ಕೆ ಸ್ವಲ್ಪ ಹಿನ್ನಡೆಯನ್ನು ಉಂಟು ಮಾಡಿದೆ.
ಆದ್ರೂ ಚಾಣಾಕ್ಷ ನಾಯಕ ಧೋನಿ ಇದ್ದರೇ ಎಲ್ಲವೂ ಸಾಧ್ಯ ಎಂಬಂತೆ ಹೊಸ ಪ್ರತಿಭೆಗಳಿಂದ ಪಂದ್ಯಗಳನ್ನು ಗೆಲ್ಲಲು ಚೆನ್ನೈ ತಂಡ ಪ್ಲಾನ್ ಮಾಡಿಕೊಂಡಿದೆ.
ಅದರಂತೆ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯ ಮುಂಬೈ ವಾಂಖೇಡೆ ಮೈದಾನದಲ್ಲಿ ನಡೆಯಲಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದೇ ಪ್ರದರ್ಶನವನ್ನು ಮುಂದುವರಿಸುವ ಯೋಚನೆಯಲ್ಲಿದೆ.

ಅಂದಹಾಗೆ ಈ ಆವೃತ್ತಿಯಲ್ಲಿ ಚೆನ್ನೈ ತಂಡ ಈವರೆಗೂ 11 ಪಂದ್ಯಗಳನ್ನಾಡಿದೆ. ಈ ಪೈಕಿ ನಾಲ್ಕು ಪಂದ್ಯದಲ್ಲಿ ತಂಡ ಗೆಲುವು ಸಾಧಿಸಿದೆ.
ಇನ್ನುಳಿದ ಪಂದ್ಯದಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಒಂಭತ್ತನೇ ಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿರುವ ಕಾರಣ, ಚೆನ್ನೈ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷೆ ಮಾಡಿಲ್ಲ.
ಕಳೆದ ಮೂರು ಪಂದ್ಯಗಳಿಂದ ಚೆನ್ನೈ ತಂಡಕ್ಕೆ ಕಾನ್ವೇ ಬ್ಯಾಟಿಂಗ್ ಆನೆಬಲ ತಂದಿದೆ. ಆರಂಭದಲ್ಲಿ ಕಾನ್ವೇ ಎದುರಾಳಿಗಳ ಮೇಲೆ ಸವಾರಿ ಮಾಡುತ್ತಿರೋದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಇವರ ಜೊತೆಗೆ ರುತುರಾಜ್, ಉತ್ತಮ ಸಾಥ್ ನೀಡುತ್ತಿದ್ದಾರೆ. ಆದ್ರೆ ರಾಬಿನ್ ಉತ್ತಪ್ಪ ಯಾಕೋ ಮಂಕಾದಂತೆ ಕಾಣುತ್ತಿದೆ.
ಮಿಡಲ್ ಆರ್ಡರ್ ನಲ್ಲಿ ಅಂಬಾಟಿ ರಾಯುಡ, ಮೊಯಿನ್ ಅಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ಶಿವಂ ದುಬೆ ಫಿನಿಶರ್ ಗಳಾಗಿದ್ದಾರೆ.
ಇತ್ತ ಬೌಲಿಂಗ್ ವಿಚಾರಕ್ಕೆ ಬಂದರೇ ಮಹೀಶ್ ತೀಕ್ಷಣ, ಮುಖೇಶ್ ಚೌಧರಿ ಚೆನ್ನೈ ತಂಡದ ಟ್ರಂಪ್ ಕಾರ್ಡ್ ಬೌಲರ್ ಗಳಾಗಿದ್ದಾರೆ.
ಪ್ರತಿ ಪಂದ್ಯದಲ್ಲೂ ಈ ಇಬ್ಬರೂ ವಿಕೆಟ್ ಬೇಟೆಯಾಡುತ್ತಿದ್ದಾರೆ. ಇವರಿಗೆ ಡ್ವೇನ್ ಬ್ರಾವೋ, ಸಿಮರ್ ಜೀತ್ ಸಿಂಗ್ ಉತ್ತಮ ಸಾಥ್ ನೀಡಬೇಕಿದೆ.
ಪ್ಲೇಯಿಂಗ್ ಇಲೆವೆನ್
ರುತುರಾಜ್ ಗಾಯಕ್ವಾಡ್
ಡೆವೊನ್ ಕಾನ್ವೇ
ರಾಬಿನ್ ಉತ್ತಪ್ಪ
ಅಂಬಟಿ ರಾಯುಡು
ಮೊಯಿನ್ ಅಲಿ
ಶಿವಂ ದುಬೆ
ಎಂಎಸ್ ಧೋನಿ
ಡ್ವೇನ್ ಬ್ರಾವೋ
ಸಿಮರ್ಜೀತ್ ಸಿಂಗ್
ಮಹೀಶ್ ತೀಕ್ಷಣ
ಮುಖೇಶ್ ಚೌಧರಿ mi-vs-csk-match-Chennai Super Kings Playing 11








