MI vs DC Match : ಮುಂಬೈ ಇಂಡಿಯನ್ಸ್ ತಂಡ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿದೆ.
ಮುಂಬೈ ಇಂಡಿಯನ್ಸ್ ಈ ಆವೃತ್ತಿಯಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದು, ಇಂದು ತನ್ನ ಕೊನೆಯ ಪಂದ್ಯವನ್ನಾಡಲಿದೆ.
ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋತಿರುವ ಮುಂಬೈ ಇಂಡಿಯನ್ಸ್ ಇಂದು ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಗುದ್ದಾಟ ನಡೆಸಲಿದೆ.
ಈ ಪಂದ್ಯ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯುತ್ತಿದೆ. ಈ ಎರಡು ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಕಳೆದ ಬಾರಿ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ವಿರುದ್ಧ 4 ವಿಕೆಟ್ಗಳಿಂದ ಜಯ ಸಾಧಿಸಿದೆ. ಹೀಗಾಗಿ ಇದು ರೋಹಿತ್ ಶರ್ಮಾ ಬಳಗಕ್ಕೆ ಸೇಡಿನ ಸಮರ ಕೂಡ ಆಗಿದೆ.
ಮುಂಬೈ ಇಂಡಿಯನ್ಸ್ ತಂಡ ಈ ಆವೃತ್ತಿಯಲ್ಲಿ ಈವರೆಗೂ 13 ಪಂದ್ಯಗಳನ್ನಾಡಿದೆ. ಇದರಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ವಿಚಾರಕ್ಕೆ ಬಂದರೇ ತಂಡದಲ್ಲಿ ಒಗ್ಗಟ್ಟಿನ ಸಮಸ್ಯೆ ಕಾಡುತ್ತಿದೆ. ಒಂದು ಪಂದ್ಯದಲ್ಲಿ ಬ್ಯಾಟರ್ ಗಳು ಮಿಂಚಿದರೇ ಬೌಲರ್ ಗಳು ಕೈ ಕೊಡುತ್ತಿದ್ದಾರೆ. ಬೌಲರ್ ಗಳು ಮಿಂಚಿದ್ರೆ ಬ್ಯಾಟರ್ ಗಳು ಕೈ ಕೊಡುತ್ತಿದ್ದಾರೆ.
ಆದ್ರೆ ಕಳೆದ ಪಂದ್ಯದಲ್ಲಿ ಮುಂಬೈ ಒಗ್ಗಟ್ಟಿನ ಪ್ರದರ್ಶನ ನೀಡಿದೆ. ಮುಂಬೈ ತಂಡದ ಪರ ಇಶಾನ್ ಕಿಶನ್ ಸ್ಥಿರ ಆಟವಾಡುತ್ತಿದ್ದಾರೆ.
ರೋಹಿತ್ ಶರ್ಮಾ ಕೂಡ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಫಾರ್ಮ್ ಗೆ ಬಂದಿದ್ದಾರೆ. ಇದು ತಂಡದ ಬಲ ಹೆಚ್ಚಿಸಿದೆ. ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ ಒಬ್ಬರೇ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ಆಸರೆಯಾಗುತ್ತಿದ್ದಾರೆ.
ಟೀಮ್ ಡೆವಿಡ್ ಹೊಸ ಭರವಸೆಯನ್ನು ತುಂಬುತ್ತಿದ್ದಾರೆ. ಡೆನಿಯಲ್ ಸ್ಯಾಮ್ಸ್, ಜಸ್ಪ್ರೀತ್ ಬೂಮ್ರಾ ಫಾರ್ಮ್ ನಲ್ಲಿರುವುದು ತಂಡಕ್ಕೆ ನೆಮ್ಮದಿಯನ್ನು ತಂದೊಡ್ಡಿದೆ.
ಇವರಿಗೆ ರಮಣ್ ದೀಪ್ ಸಿಂಗ್, ಹೃತಿಕ್ ಶೋಕಿನ್, ರಿಲೆ ಮೆರೆಡಿತ್, ಕುಮಾರ್ ಕಾರ್ತಿಕೇಯ ಉತ್ತಮ ಸಾಥ್ ನೀಡಬೇಕಾಗಿದೆ.
ಆದ್ರೆ ಈಗಾಗಲೇ ಪ್ಲೇ ಆಫ್ಸ್ ಹಾದಿಯಿಂದ ದೂರ ಇರುವ ಕಾರಣ ಮುಂಬೈ ತಂಡ ಬೆಂಚ್ ಸ್ಟ್ರೆಂಥ್ ಪರೀಕ್ಷೆಗೆ ಮುಂದಾಗುವ ಸಾಧ್ಯತೆಗಳಿವೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಸೇರಿದಂತೆ ಯುವಕರಿಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ನೀಡಬಹುದು ಎಂದು ಅಂದಾಜಿಸಲಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ಪ್ಲೇಯಿಂಗ್ ಇಲೆವೆಲ್
ಇಶಾನ್ ಕಿಶನ್
ರೋಹಿತ್ ಶರ್ಮಾ
ತಿಲಕ್ ವರ್ಮಾ
ಟಿಮ್ ಡೇವಿಡ್
ಟ್ರಿಸ್ಟಾನ್ ಸ್ಟಬ್ಸ್
ಟೀಮ್ ಡೇವಿಡ್
ರಮಣದೀಪ್ ಸಿಂಗ್
ಡೇನಿಯಲ್ ಸಾಮ್ಸ್
ಹೃತಿಕ್ ಶೋಕಿನ್
ಜಸ್ಪ್ರೀತ್ ಬುಮ್ರಾ
ರಿಲೆ ಮೆರೆಡಿತ್
ಕುಮಾರ್ ಕಾರ್ತಿಕೇಯ
MI vs DC Match Mumbai Indians Probable XI