MI vs GT Match | ರೋಚಕ ಹಣಾಹಣಿಯಲ್ಲಿ ಟೈಟಾನ್ಸ್ ಗೆ ಸೋಲು..
ಬ್ರೆಬೋರ್ನ್ ಮೈದಾನದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿದೆ. ಆ ಮೂಲಕ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಎರಡನೇ ಗೆಲುವು ಸಾಧಿಸಿದೆ.
ಕೊನೆಯ ಬಾಲ್ ವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ 5 ರನ್ಗಳ ರೋಚಕ ಗೆಲುವು ಸಾಧಿಸಿದೆ.
ಬ್ರೆಬೊರ್ನ್ ಅಂಗಳದಲ್ಲಿ ಟಾಸ್ ಸೋತ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಬಂದ ರೋಹಿತ್ ಶರ್ಮಾ, ಇಶಾನ್ ಗೆ ಟೂರ್ನಿಯಲ್ಲಿ ಮೊದಲ ಬಾರಿಗೆ ಉತ್ತಮ ಜೊತೆಯಾಟವನ್ನು ನೀಡಿದರು. ರೋಹಿತ್ ಶರ್ಮಾ 45 ರನ್, ಇಶಾನ್ ಕಿಶಾನ್ 43 ರನ್ ಗಳಿಸುವ ಮೂಲಕ ಮೊದಲ ವಿಕೆಟ್ ಗೆ ಈ ಜೋಡಿ 74 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಇದಾದ ಬಳಿಕ ಬಂದ ಸೂರ್ಯ ಕುಮಾರ ಯಾದವ್ 13 ರನ್, ತಿಲಕ್ ವರ್ಮಾ 21 ರನ್ ಗಳಿ ನಿರ್ಗಮಿಸಿದರು. ಇವರ ಹಿಂದೆಯೇ ಕಿರಾನ್ ಪೊಲಾರ್ಡ್, ಡೆನಿಯಲ್ ಸ್ಯಾಮ್ಸ್ ಕೂಡ ಪೆವಿಲಿಯನ್ ಸೇರಿಕೊಂಡರು. ಆದ್ರೆ ಕೊನೆಯಲ್ಲಿ ಬಿರುಸಿನ ಆಟವಾಡಿದ ಟೀಮ್ ಡೇವಿಡ್ 21 ಎಸೆತಗಳಲ್ಲಿ 4 ಸಿಕ್ಸರ್, 2 ಬೌಂಡರಿಗಳ ಸಹಿತ 44 ರನ್ ಚಚ್ಚಿದರು. ಪರಿಣಾಮ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿತು. ಗುಜರಾತ್ ಪರ ರಶೀದ್ ಖಾನ್ 2, ಅಲ್ಜರಿ ಜೋಸೆಫ್, ಫರ್ಗುಸನ್ ಹಾಗೂ ಸಾಂಗ್ವಾನ್ ತಲಾ 1 ವಿಕೆಟ್ ಪಡೆದ್ರು.
ಇತ್ತ ಮುಂಬೈ ನೀಡಿದ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡ ಬೊಂಬಾಟ್ ಆರಂಭ ಪಡೆಯಿತು. ವೃದ್ಧಿಮಾನ್ ಸಹಾ, ಶುಭ್ ಮನ್ ಗಿಲ್ ಮೊಲದ ವಿಕೆಟ್ ಗೆ 106 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಸಹಾ 40 ಎಸೆತಗಳಲ್ಲಿ ಆರು ಬೌಂಡರಿ, 2 ಸಿಕ್ಸರ್ ಸಹಿತ 55 ರನ್ ಗಳಿಸಿದ್ರೆ, 36 ಎಸೆತಗಳಲ್ಲಿ ಆರು ಬೌಂಡರಿ, 2 ಸಿಕ್ಸರ್ ಸಹಿತ ಶುಭ್ ಮನ್ ಗಿಲ್ 52 ಆರ್ಕಷಕ ಅರ್ಧಶತಕ ಸಿಡಿಸಿದರು.
ಆದ್ರೆ ಓಪನರ್ಸ್ ಔಟ್ ಆದ ನಂತರ ಬಂದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ(24) ಹಾಗೂ ಸಾಯಿ ಸುದರ್ಶನ್(14) ರನ್ ಸಿಡಿಸಿದರು. ಇವರ ಬೆನ್ನಲ್ಲೇ 3 ರನ್ ಗಳಿಸಿ ತೆವಾಟಿಯಾ ಪೆವಿಲಿಯನ್ ಸೇರಿಕೊಂಡರು. 15 ಓವರ್ ವರೆಗೂ ಜಯದ ಆಸೆ ಕೈಚಲ್ಲಿದ್ದ ಮುಂಬೈ ಇಂಡಿಯನ್ಸ್ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿತು. ಸಂಪೂರ್ಣ ಮೇಲುಗೈ ಹೊಂದಿದ್ದ ಗುಜರಾತ್ ಟೈಟನ್ಸ್ ಆಟಕ್ಕೆ ಮುಂಬೈ ಬ್ರೇಕ್ ಹಾಕಿತು. ಕೊನೆಯಲ್ಲಿ ಗುಜರಾತ್ ತಂಡಕ್ಕೆ ಕೊನೆ ಓವರ್ ನಲ್ಲಿ ಗೆಲ್ಲಲು 9 ರನ್ ಬೇಕಿತ್ತು. ಅಂತಿಮ ಓವರ್ ಎಸೆದ ಡೆನಿಯಲ್ ಸ್ಯಾಮ್ಸ್, ಕೇವಲ 3 ರನ್ ಕೊಟ್ಟು ಮುಂಬೈಗೆ ರೋಚಕ ಗೆಲುವು ತಂದುಕೊಟ್ರು.
mi-vs-gt-match-Mumbai Indians beat Gujarat Titans by 5 runs in a thriller