MI VS RR : ಮುಂಬೈ – ರಾಜಸ್ಥಾನ ಕಾಳಗದಲ್ಲಿ ಗೆಲುವು ಯಾರಿಗೆ..?
ಇಂದು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, ಮೊದಲ ಮ್ಯಾಚ್ ನಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30 ಕ್ಕೆ ಪಂದ್ಯ ಆರಂಭವಾಗಲಿದೆ.
ರಾತ್ರಿ 7 ಗಂಟೆಗೆ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ – ಡೆಲ್ಲಿ ಕ್ಯಾಪಿಟಲ್ಸ್ ಕಾಳಗ ನಡೆಯಲಿದೆ.
ಮುಂಬೈ ಮತ್ತು ಆರ್ಆರ್ ತಂಡಗಳು ಪ್ರಸಕ್ತ ಋತುವಿನಲ್ಲಿ ಒಂದೊಂದು ಪಂದ್ಯ ಆಡಿದ್ದು, ಮುಂಬೈ.. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ ಗಳ ಸೋಲು, ರಾಜಸ್ಥಾನ್ ರಾಯಲ್ಸ್.. ಸನ್ರೈಸರ್ಸ್ ಹೈದರಾಬಾದ್ ಮೇಲೆ 61 ರನ್ ಜಯ ಸಾಧಿಸಿದೆ.
ಹೀಗಾಗಿ ರೋಹಿತ್ ಗ್ಯಾಂಗ್ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಬೋಣಿ ಹೊಡೆಯುವ ಲೆಕ್ಕಾಚಾರದಲ್ಲಿದೆ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ಲೀಗ್ನಲ್ಲಿ ತಮ್ಮ ಎರಡನೇ ಗೆಲುವನ್ನು ಹುಡುಕುತ್ತಿದ್ದಾರೆ.
ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ 210 ರನ್ ಗಳಿಸಿ ಎದುರಾಳಿಗಳನ್ನು 149 ರನ್ಗಳಿಗೆ ಕಟ್ಟಿಹಾಕಿದ್ದ ರಾಜಸ್ಥಾನ, ಇಂದಿನ ಪಂದ್ಯಕ್ಕಾಗಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳುವುದಿಲ್ಲ.
ಇತ್ತ ಮುಂಬೈ ಇಂಡಿಯನ್ಸ್ ವಿಚಾರಕ್ಕೆ ಬಂದರೇ ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ (ಅನ್ಮೋಲ್ಪ್ರೀತ್ ಸಿಂಗ್ ಬದಲಿಗೆ) ಮತ್ತೆ ಮರಳುವ ಸಾಧ್ಯತೆಯಿದೆ.
ಜೊತೆಗೆ ದೆಹಲಿ ವಿರುದ್ಧದ ಪಂದ್ಯದಲ್ಲಿ ರನ್ ಗಳನ್ನು ಬಿಟ್ಟುಕೊಟ್ಟ ಡೇನಿಯಲ್ ಸಾಮ್ಸ್ ಬದಲಿಗೆ ಇನ್ನೊಬ್ಬ ವಿದೇಶಿ ಬೌಲರ್ ಫೇಬಿಯನ್ ಅಲೆನ್ ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.