ಮದ್ದಿಲ್ಲದೆಯೂ ಮರ್ಧಿಸಬಹುದು ಮೈಗ್ರೇನ್…. ಹೇಗೆ ಗೊತ್ತಾ ?
“ಮೈಗ್ರೇನ್” ಪ್ರಪಂಚದಾದ್ಯಂತ ಜನರು ಅನುಭವಿಸುತ್ತಿರುವ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಒಂದು. ಇದು ಅತ್ಯಂತ ಸಾಮಾನ್ಯವಾದ ನರಮಂಡಲದ ಅಸ್ವಸ್ಥತೆಯಾಗಿದೆ. ಅಂಕಿಅಂಶಗಳ ಪ್ರಕಾರ, 20% ನಷ್ಟು ಜನರು ತಲೆನೋವನ್ನು ತಗ್ಗಿಸಲು ಔಷಧಿಯನ್ನು ಮೊರೆಹೋಗುತ್ತಾರೆ.
ವಿಜ್ಞಾನಿಗಳ ಪ್ರಕಾರ, ಔಷಧಿಗಳಿಲ್ಲದೆಯೂ ಮೈಗ್ರೇನ್ಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಜರ್ನಲ್ ಆಫ್ ದಿ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ (JAMA) ನಲ್ಲಿ ಪ್ರಕಟವಾದ ಒಂದು ಸಂಶೋಧನೆಯ ಪ್ರಕಾರ ಧ್ಯಾನ ಮತ್ತು ಯೋಗ ಮೈಗ್ರೇನ್ ಅನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಮೈಗ್ರೇನ್ ಬಗ್ಗೆ ಕೆಲವು ಸಂಗತಿಗಳು:
ಮೈಗ್ರೇನ್ ರಿಸರ್ಚ್ ಫೌಂಡೇಶನ್ ಪ್ರಕಾರ, ವಿಶ್ವದ 100 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
18 ರಿಂದ 44 ವರ್ಷ ವಯಸ್ಸಿನವರಲ್ಲಿ ಮೈಗ್ರೇನ್ ಹೆಚ್ಚು ನೋವಿನಿಂದ ಕೂಡಿರುತ್ತವೆ.
90% ರೋಗಿಗಳಲ್ಲಿ ಮೈಗ್ರೇನ್ ಆನುವಂಶಿಕವಾಗಿ ಬರುತ್ತದೆ.
ಪ್ರತಿದಿನ ಸುಮಾರು 40 ಲಕ್ಷ ಜನರು ಮೈಗ್ರೇನ್ ನಿಂದ ಬಳಲುತ್ತಿರುತ್ತಾರೆ.
ಮೈಗ್ರೇನ್ ನಿಂದ ಬಳಲುತ್ತಿರುವ ರೋಗಿಗಳಲ್ಲಿ 85% ಮಹಿಳೆಯರಿದ್ದಾರೆ.
ಸಂಶೋಧನೆ ಏನು ಹೇಳುತ್ತದೆ..
ಸಂಶೋಧನೆಯಲ್ಲಿ, ಮೈಗ್ರೇನ್ ರೋಗಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಒಂದು ಗುಂಪಿಗೆ ಚಿಕಿತ್ಸಾ ವಿಧಾನವಾಗಿ ಧ್ಯಾನ, ಹಠ ಯೋಗ ಮತ್ತು ಉಸಿರಾಟ ವ್ಯಾಯಾಮಗಳನ್ನ ಅಭ್ಯಾಸ ಮಾಡಲು ಹೇಳಲಾಯಿತು. ಇನ್ನೊಂದು ಗುಂಪಿಗೆ ತಲೆನೋವಿನ ಬಗ್ಗೆ ಮಾತ್ರ ಶಿಕ್ಷಣ ನೀಡಲಾಯಿತು. ಮೈಗ್ರೇನ್ನ ಪ್ರತಿಯೊಂದು ಅಂಶವನ್ನು ವಿವರಿಸಿ, ತರಗತಿಯ ಸಮಯದಲ್ಲಿ, ಅವರಿಗೆ ಪ್ರಶ್ನೋತ್ತರಗಳನ್ನ ಕೇಳಲಾಯಿತು. ಚರ್ಚೆ ನಡೆಸಲಾಯಿತು.
ಈ 8 ವಾರಗಳ ಪ್ರಯೋಗದಲ್ಲಿ, ತಲೆನೋವು ಕಡಿಮೆ ಮಾಡಲು ಧ್ಯಾನ ಆಧಾರಿತ ಚಿಕಿತ್ಸೆಯು ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ. ನಿಯಮಿತವಾಗಿ ಧ್ಯಾನ ಮತ್ತು ಯೋಗ ಮಾಡುವವರಲ್ಲಿ ಮೈಗ್ರೇನ್ ಮಾತ್ರವಲ್ಲ, ಖಿನ್ನತೆ ಮತ್ತು ಆತಂಕವೂ ಕಡಿಮೆಯಾಗಿದೆ. ಇನ್ನೊಂದೆಡೆ ಶಿಕ್ಷಣ ಪಡೆಯುವವರ ಸ್ಥಿತಿ ಅಷ್ಟಾಗಿ ಸುಧಾರಿಸಿಲ್ಲ.
ಮೈಂಡ್ಫುಲ್ ಧ್ಯಾನ ಮಾಡುವುದು ಹೇಗೆ
ಈ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಮನೆಯಲ್ಲಿ ಕುಳಿತು ಮೈಗ್ರೇನ್ ಅನ್ನು ಕಡಿಮೆ ಮಾಡಬಹುದು:
ಮೊದಲು ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಒಪ್ಪಿಕೊಳ್ಳಿ.
ಯಾವುದೇ ಗೊಂದಲವಿಲ್ಲದೆ ನಿಮ್ಮ ಬೆನ್ನಿನ ಮೇಲೆ ಮಲಗಿಕೊಳ್ಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಉಸಿರಾಟದ ಕಡೆಗೆ ಗಮನ ಕೊಡಿ. ತಲೆಯಿಂದ ಹೆಬ್ಬೆರಳವರೆಗೆ ವರೆಗೆ ಇಡೀ ದೇಹವನ್ನು ಗಮನಿಸಿ.
ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಧಾನವಾಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ, ನಂತರ ನಿಧಾನವಾಗಿ ಉಸಿರು ಬಿಡಿ. ಈ ಉಸಿರಾಟದ ವ್ಯಾಯಾಮ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ.
ಶುದ್ಧ ಗಾಳಿ ಮತ್ತು ಉತ್ತಮ ವಾತಾವರಣದಲ್ಲಿ ಪ್ರತಿದಿನ 30 ನಿಮಿಷಗಳ ಕಾಲ ನಡೆದಾಡಿ. ನಡೆಯುವಾಗ ನಿಮ್ಮ ಉಸಿರಾಟದ ಬಗ್ಗೆ ಗಮನ ಕೊಡಿ.
ಪ್ರತಿದಿನ 20 ರಿಂದ 30 ನಿಮಿಷಗಳ ಕಾಲ ಸ್ಟ್ರೆಚಿಂಗ್ ಮತ್ತು ಹಠ ಯೋಗ ಅಭ್ಯಾಸ ಮಾಡಿ.